ಟಿ.ವಿ ಸ್ಟೇಷನ್ – ಕುಂದವಾಡ ಕೆರೆಗಳಿಗೆ ಮೇಯರ್ ಭೇಟಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೪; ನಗರಕ್ಕೆ ನೀರು ಪೂರೈಸುವ ಟಿ.ವಿ ಸ್ಟೇಷನ್ ಹಾಗೂ ಕುಂದವಾಡ ಕೆರೆಗಳಿಗೆ ಮಹಾಪೌರರಾದ  ವಿನಾಯಕ ಬಿ ಹೆಚ್, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಹಾಗೂ ಪಾಲಿಕೆ ಸದಸ್ಯರನ್ನೊಳಗೊಂಡ ತಂಡದವರು ಭೇಟಿ ನೀಡಿ ಪರಿಶೀಲಿಸಿದರು. ದಾವಣಗೆರೆ ಮಹಾನಗರಪಾಲಿಕೆಯ ಟಿ ವಿ ಸ್ಟೇಷನ್ ಹಾಗೂ ಕುಂದವಾಡ ಕೆರೆಗಳಿಗೆ ಭದ್ರಾ ನಾಲೆಯಿಂದ ನೀರು ಈ ದಿನ ಬೆಳಿಗ್ಗೆ ನೀರು ತಲುಪಿದ್ದು, ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ತ್ವರಿತವಾಗಿ ಕೆರೆಗಳನ್ನು ತುಂಬಿಸಿಕೊಳ್ಳುವಂತೆ ಹಾಗೂ ನಗರಕ್ಕೆ ನೀರಿನ ಕೊರತೆ ಉಂಟಾಗದೇ ಇರುವ ರೀತಿಯಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ಮಂಜುನಾಥ್ ಗಡಿಗುಡಾಳ್, ಜಾಕೀರ್ ಅಲಿ , ಮುಖಂಡರಾದ ಗೋಪಿನಾಯ್ಕ್, ಶಫೀಕ್ ಪಂಡಿತ್, ಅಧಿಕಾರಿಗಳು  ಹಾಗೂ ಇತರರು ಹಾಜರಿದ್ದರು.