ಸತ್ವಭರಿತ ಆಹಾರ ಸೇವಿಸಿ ಆರೋಗ್ಯಕಾಪಾಡಿಕೊಳ್ಳಿ
ಮುನವಳ್ಳಿ,ಆ.೪: ಸದೃಡ ಆರೋಗ್ಯಕ್ಕಾಗಿ ಗರ್ಭಿಣಿಯರು ಮತ್ತು ಬಾಣಂತಿಯರು, ಮಕ್ಕಳು, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದು ಸವದತ್ತಿ ಶಿಶು ಅಭಿವೃದ್ದಿಯೋಜನಾಧಿಕಾರಿ ಸುನಿತಾ ಪಾಟೀಲ ಹೇಳಿದರು.
ಅವರು ಕಾರ್ಲಕಟ್ಟಿಯ ಸಿದ್ದಾರೂಢಮಠದ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ, ಗ್ರಾಮೀಣ ಆರೋಗ್ಯ ನೈರ್ಮಲ್ಯ ಹಾಗೂ ಪೋಷಣೆ ಮತ್ತು ಬಾಲ್ಯವಿವಾಹ ತಡೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಯಿ ಮಗು ಹುಟ್ಟಿದ ಅರ್ದತಾಸಿನ ಒಳಗಡೆ ಎದೆ ಹಾಲನ್ನು ಕುಡಿಸದರೆ ಅದು ಅಮೃತಕ್ಕೆ ಸಾಮಾನ ವಾಗಿರುವುದಾಗಿ ತಿಳಿಸಿದರು. ಬಾಲ್ಯವಿವಾಹದಿಂದ ಆಗುವ ತೊಂದರೆಗಳ ಬಗ್ಗೆ ಮಹಿಳೆಯರಿಗೆ ತಿಳಿಹೇಳಿದರು. ತಮ್ಮ ಇಲಾಖೆಯಿಂದ ಸಿಗುವ ಯೋಜನೆಗಳಾದ ಮಾತೃವಂದನಾ, ಮಿಷನ್ ಶಕ್ತಿ ಯೋಜನೆ, ಗೃಹಲಕ್ಷಿö್ಮÃ ಯೋಜನೆ, ಸುಕನ್ಯ ಸಮೃದ್ದಿ ಯೋಜನೆ, ಮಾತೃಪೂರ್ಣಯೋಜನೆ ಮತ್ತು ಸಮತೋಲನ ಆಹಾರ ಪದ್ದತಿ ಹೇಗಿರಬೇಕು, ವೈಯಕ್ತಿಕ ಸ್ವಚ್ಚತೆ, ಸಾಮಾಜಿಕ ಆರೋಗ್ಯ ಪ್ರಜ್ಞೆಯ ಜಾಗೃತಿ ಮೂಡಿಸಿದರು. ಮತ್ತು ತಮ್ಮ ಇಲಾಖೆಯಿಂದ ಸಿಗುವ ಯೋಜನೆಗಳ ಪ್ರಯೋಜನವನ್ನು ಪಡೆಯಲು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಯಕ್ಕುಂಡಿ ಗ್ರಾ ಪಂ ಅಧ್ಯಕ್ಷೆ ಪೈರೋಜಾ ಬಾ ಬಾರಿಗಿಡದ ವಹಿಸಿ ಮಾತನಾಡಿ ತಾಯಂದಿರರು ಅಂಗನವಾಡಿ ಕೇಂದ್ರದಲ್ಲಿ ಸರಕಾರ ನೀಡುವ ಪೌಟ್ಠಿಕ ಆಹಾರ ಸೇವಿಸಬೇಕು ಮತ್ತು ಆ ಇಲಾಖೆಯಿಂದ ಸಿಗುವ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೆಕೆಂದರು.
ಎಸಿಡಿಪಿಒ ಸವದತ್ತಿ ಚೇತನಾ ಹಳ್ಳಿ, ಗ್ರಾಪಂ ಸದಸ್ಯರಾದ ಶಿವಾನಂದ ಕಂಬಿಯವರ, ಈರಪ್ಪ ಮಾದರ, ಶೇಖವ್ವ ತಿಮ್ಮೇಶೀ, ಬೀಮವ್ವ ಮಾದರ, ಆರೋಗ್ಯ ಇಲಾಖೆಯ ರೇಣುಕಾ ದೊಡ್ಡಕುರಿ, ಉಪಸ್ಥಿತರಿದ್ದರು. ಯಕ್ಕುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಮಕ್ಕಳು,ಬಾಣಂತಿಯರು, ಕಿಶೋರಿಯರು ಮತ್ತು ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.