ಬೀದರ್‍ನಲ್ಲಿ ಎಂ.ಎ.ಎನ್.ಯು. ಸೆಟ್‍ಲೈಟ್ ಕ್ಯಾಂಪಸ್ ಆರಂಭಿಸಲು ಒತ್ತಾಯ
ಬೀದರ್,ಆ.4-ಹೈದ್ರಾಬಾದನ ಮೌಲಾನಾ ಆಜಾದ್ ಉರ್ದು ವಿಶ್ವವಿದ್ಯಾಲಯದ ಉಪ ಕುಲಪತಿ ಸೈಯದ್ ಅಯಿನುಲ್ ಹಸನ್ ಅವರನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದ ಅರಳಿ ಅವರು ಭೇಟಿ ಮಾಡಿ ಬೀದರ್‍ನಲ್ಲಿ ಕೇಂದ್ರ ಸರ್ಕಾರದಿಂದ 2013-14ರಲ್ಲಿ ಮಂಜೂರಾದ ಮೌಲಾನಾ ಆಜಾದ್ ಉರ್ದು ವಿಶ್ವವಿದ್ಯಾಲಯ (ಎಂ.ಎ.ಎನ್.ಯು) ಸೆಟ್‍ಲೈಟ್ ಕ್ಯಾಂಪಸ್‍ನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಅರಳಿ ಅವರ ಮನವಿಗೆ ಸ್ಪಂದಿಸಿದ ಉಪ ಕುಲಪತಿಗಳು, ಸರ್ಕಾರ ಇದಕ್ಕಾಗಿ ಈಗಾಗಲೇ ಗೋರನಳ್ಳಿ (ಬಿ) ಗ್ರಾಮದಲ್ಲಿ 9.33 ಎಕರೆ ಜಮೀನನ್ನು ಮೀಸಲಿರಿಸಿದ್ದು, ನೀಲಿನಕ್ಷೆ ಸಿದ್ದಪಡಿಸಿ ಶೀಘ್ರವಾಗಿ ಎಂ.ಎ.ಎನ್.ಯು.ಸೆಟ್‍ಲೈಟ್ ಕ್ಯಾಂಪಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪ್ರಮುಖರು ಮತ್ತು ಜಿಲ್ಲೆಯ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.