೧೬ನೇ ಲಕ್ಷ ಬಿಲ್ವಾರ್ಚನೆ
ಮುನವಳ್ಳಿ,ಆ.೪: ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿAಗೇಶ್ವರ ದೆವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರತಿವರ್ಷದಂತೆ ಶ್ರಾವಣ ಮಾಸದ ಮೊದಲನೆ ಸೋಮವಾರ ಅಗಸ್ಟ ೫ ರಂದು ಬೆಳಿಗ್ಗೆ ೬ ಘಂಟೆಯಿAದ ಶ್ರೀ ಪಂಚಲಿAಗೇಶ್ವರನಿಗೆ ೧೬ ನೇಯ ವರ್ಷದ ಲಕ್ಷ ಬಿಲ್ವಾರ್ಚನೆ ಹಾಗೂ ದೇವಸ್ಥಾನದ ಆವರಣದಲ್ಲಿರುವ ಎಲ್ಲ ದೇವರುಗಳಿಗೂ ಬೆಳಿಗ್ಗೆ ೪ ಗಂಟೆಯಿAದ ೬-೩೦ ರವರೆಗೆ ರುದ್ರಾಭಿಷೇಕ ಜರಗುವದು.
ಸದ್ಬಕ್ತರು ಅಗಸ್ಟ ೪ ರಂದು ಸಂಜೆ ೫ ಗಂಟೆಯಿAದ ಬಿಲ್ವಪತ್ರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ತಂದು ಕೊಟ್ಟು ಶ್ರೀ ಪಂಚಲಿAಗೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.