ತಾಯಿ ಹಾಲು ಅಮೃತಕ್ಕೆ ಸಮಾನ : ಮಾನಸ ಗೌಡ
ಸಂಜೆವಾಣಿ ವಾರ್ತೆ
ಹಿರಿಯೂರು: ಆ.4-  ತಾಯಿ ಹಾಲು ಅಮೃತಕ್ಕೆ ಸಮಾನ ಅಲ್ಲದೆ ಮಗುವಿನ ಆರೋಗ್ಯಕ್ಕೆ ತಾಯಿ ಹಾಲು ದಿವ್ಯ ಔಷಧ  ಇದರಿಂದ ತಾಯಿ ಮಗುವಿನ ಸಂಬಂಧ ವೃದ್ಧಿ ಯಾಗುತ್ತದೆ ಎಂದು ಮನವಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಮಾನಸ ಗೌಡ ಹೇಳಿದರು. ಇಲ್ಲಿನ ವೇದಾವತಿ ನಗರದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಯಿಯ ಎದೆಹಾಲು ಮಗುವಿಗೆ ಮೊದಲನೆಯ ಲಸಿಕೆ  ಹಾಗೆ ಮೊದಲನೇ ಒಂದು ಎರಡು ದಿನದ ಹಾಲು ಹಳದಿ ಮತ್ತು ಗಿಣ್ಣವಾದ ಹಾಲನ್ನು ಮಗುವಿಗೆ ಕೊಡಬೇಕು, ಹಣ್ಣು ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳು ಹಾಲು ಮೊಟ್ಟೆ ಎಲ್ಲ ಬಾಣಂತಿಯರು ಹಾಗೂ ಗರ್ಭಿಣಿಯರು ಸೇವಿಸಬೇಕು ಎಂದರು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕರಾದ ಸಣ್ಣ ರಂಗಮ್ಮನವರು ಮಾತನಾಡಿ ಎಲ್ಲ ಬಾಣಂತಿಯರು ಆರು ತಿಂಗಳವರೆಗೆ ತಾಯಿ ಎದೆಹಾಲನ್ನೇ ಕೊಡಬೇಕು ಮತ್ತು ಎರಡು ವರ್ಷದವರೆಗೂ ತಾಯಿಯ ಎದೆಹಾಲನ್ನು ಕುಡಿಸಬೇಕು ಮಕ್ಕಳಿಗೆ ಪ್ರತಿಗುರುವಾರದಂದು ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ ತಾಯಿಯ ಎದೆಹಾಲು ಮುಖ್ಯ ಎಂದು ಆರೋಗ್ಯ ಶಿಕ್ಷಣ ನೀಡಿದರು.ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳಾದ ಮುಜಾಸಿಮ್, ಜ್ಯೋತಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಹಾಗೂ ಗರ್ಭಿಣಿಯರು, ಮತ್ತು ಬಾಣಂತಿಯರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.