ಭಾರಿ ಮಳೆ: ಕಳಚಿದ ಗುಡಿ ಗೋಪುರ
ಚನ್ನಮ್ಮನ ಕಿತ್ತೂರು,ಆ.೪: ಬಾರಿ ಮಳೆ ಹಿನ್ನೆಲೆ ಪಟ್ಟಣದ ಕೊಂಡವಾಡಚೌಕ ಕರೆಮ್ಮದೇವಿ ದೇವಸ್ಥಾನದ ಗೋಪುರವು ಕುಸಿದು ಬಿದ್ದಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಆದರೆ ಸ್ಥಳೀಯ ಹಿರಿಯರು ಗುಡಿ ನಿರ್ಮಿಸಿ ದೇವಿಯ ಮೂರ್ತಿ ಕೂಡಿಸಲು ನಿರ್ಣಯ ತೆಗೆದುಕೊಂಡು ಕಳೆದ ೨೦೨೧ ರಂದು ದೇವಿ ಮೂರ್ತಿ ಅಡಿಗಲ್ಲು ಕಾರ್ಯಕ್ರಮ ಜರುಗಿತ್ತು.
ಅಲ್ಲಿನ ಜನರ ಅನಸಿಕೆ ಪ್ರಕಾರ ಕಲ್ಲಿನಿಂದ ನಿರ್ಮಿಸಿದ ಗೋಪುರ ಇದು ಅದರ ಭಾರ ಹೆಚ್ಚಾಗಿದ್ದು ಮತ್ತು ಮಳೆ ಅವಾಂತರದಿAದ ಕುಸಿದಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪಪಂ ಅಧಿಕಾರಿ ಮಲ್ಲಯ್ಯಾ ಹಿರೇಮಠ ಭೇಟಿನೀಡಿ ಪರಿಶೀಲಿಸಿ ಮಾತನಾಡಿ ಗೋಪುರ ಕಳಚಿದರೂ ದೇವರ ಕೃಪೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಸ್ಥಳೀಯ ಶಾಸಕರ ಹಾಗೂ ಸಂಭದಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆದು ಪತ್ರ ಬರೆದು ಅನುದಾನ ಕೊಡಿಸುವುದಾಗಿ ಹೇಳಿದರು.
ಈ ಸಮಯದಲ್ಲಿ ಸ್ಥಳೀಯ ಸಾರ್ವಜನಿಕರಿದ್ದರು.