ಕ್ರೀಡಾಪಟುಗಳ ಹಾಸ್ಟೆಲಿಗೆ ದಿನೇಶ್ ಕೆ ಶೆಟ್ಟಿ ಭೇಟಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೪ : ದಾವಣಗೆರೆ ಕೊಕ್ಕೋ ಕಬ್ಬಡಿ ಕುಸ್ತಿ ಹಾಸ್ಟೆಲ್ ನಲ್ಲಿ ಕ್ರೀಡಾಪಟುಗಳು ಊಟದ ವಿಷಯವಾಗಿ ಧರಣಿ ನಡೆಸಿದ ವಿಷಯವನ್ನು ತಿಳಿದುಕೊಂಡ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ  ಹಾಸ್ಟೆಲ್ ಗೆ  ಭೇಟಿ ನೀಡಿ ಕ್ರೀಡಾಪಟುಗಳ ಊಟದ ವ್ಯವಸ್ಥೆ ಹೇಗಿದೆ ಎಂದು ಪರಿಶೀಲಿಸಿ ಮಕ್ಕಳ ಜೊತೆ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ಮಕ್ಕಳು ಇಲ್ಲಿ ಕಬ್ಬಡಿ, ಖೊ ಖೋ, ಕುಸ್ತಿಯ  160ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಸ್ಟೆಲ್ನಲ್ಲಿ ಇದ್ದು  ತಮಗೆ ಮಾಂಸಾಹಾರಊಟ, ಹಣ್ಣು ,ಡ್ರೈ ಫ್ರೂಟ್ಸ್ ವ್ಯವಸ್ಥೆ ಸರಿಯಾಗಿಲ್ಲ ಎಂದು ತೊಂದರೆಗಳನ್ನು ಹೇಳಿಕೊಂಡರು ಆಗ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರು ಕ್ರೀಡಾಪಟುಗಳಿಗೆ ಸಾಂತ್ವನ ಹೇಳಿ ಕೆಲವೇ ದಿನಗಳಲ್ಲಿ ಅಧಿಕಾರಿಗಳ ಜೊತೆ ಸಭೆ ಕರೆದು ಎಲ್ಲಾ ಸಮಸ್ಯೆಗಳನ್ನು ಜಿಲ್ಲಾ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು  ಶಂಕ್ರಪ್ಪನವರ ಗಮನಕ್ಕೆ ತಂದು ಶೀಘ್ರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಕಾರ್ಯದರ್ಶಿಗಳಾದ ಜಯಪ್ರಕಾಶ್ ಗೌಡ ಹಾಗೂ ಕೆಟಿಜಿ ನಗರದ ಸರ್ಕಲ್ ಇನ್ಸ್ಪೆಕ್ಟರ್ ಆದ ಸುನಿಲ್ ಕುಮಾರ್ ಯುವರಾಜ್ ಇನ್ನು ಮುಂತಾದವರು ಇದ್ದರು.