ಐತಿಹಾಸಿಕ ಗಡಾದಮರಡಿ ಕಾವಲುಗೋಪುರ ಕುಸಿತ
ಚನ್ನಮ್ಮನ ಕಿತ್ತೂರು,ಆ.೪: ರಾಜ್ಯಾಧ್ಯಂತ ಧಾರಾಕಾರ ಸುರಿದ ಮಳೆಯ ಹಿನ್ನೆಲೆ ಕಿತ್ತೂರಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ಚನ್ನಮ್ಮನ ಕಾಲದ ಐತಿಹಾಸಿಕ ಗಡಾದ ಮರಡಿ (ಕಾವಲು ಗೋಪುರ) ಕುಸಿದು ಬಿದ್ದಿದೆ.
೩೦ ಅಡಿ ಎತ್ತರ ಹೊಂದಿದ ಕಾವಲು ಗೋಪುರ ಕುಸಿದಿದ್ದು ಶೇಕಡಾ ೬೦ ರಷ್ಟು ಭಾಗ ನೆಲಕಚ್ಚಿದೆ. ಕೆಲವೇ ದಿನಗಳ ಹಿಂದೆ ಕಿತ್ತೂರು ಅಭಿವೃದ್ದಿ ಪ್ರಾಧಿಕಾರ ಅಡಿಯಲಿ ್ಲ೧.೮೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಗೋಪುರ ಕಾಮಗಾರಿ ಕೊನೆ ಹಂತದಲ್ಲಿದ್ದರೂ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ ಗುತ್ತಿಗೆದಾರರು ಕೆಲಸವನ್ನುಅಲ್ಲಿಗೆ ಉಳಿಸಿದರು. ಗಂಡ-ಹೆAಡರ ನಡುವೆ ಕುಸೂ ಬಡವಾಯಿತು. ಎನ್ನುವಂತೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ಗುದ್ದಾಟದಿಂದ ಕಾವಲು ಗೋಪುರ ಕುಸಿಯುವಂತಾಯಿತು.
ಈ ಗೋಪುರದ ಮೇಲೆ ಪ್ರತಿ ವರ್ಷ ಅಗಷ್ಟ್ ೧೫ ರಂದು ಧ್ವಜವಂದನೆ ಮಾಡಲು ೮೦ ಅಡಿ ಕಂಬದ ಕೂಡಿಸಿಲಾಗಿತ್ತು. ಗೋಪುರ ನೆಲಕಚ್ಚಿದ ಕಾರಣದಿಂದ ಕಂಬ ಬೀಳುವ ಸಾಧ್ಯತೆಯಿತ್ತು. ಅದನ್ನು ಮಶಿನ್ ಸಹಾಯದಿಂದ ತೆರವುಗೊಳಿಸಲಾಯಿತು. ಆ ಕಾರಣದಿಂದ ಈಸಲದ ಧ್ವಜಾರೋಹನಕ್ಕೆ ಗೋಪುರದ ಮುಂಭಾಗದಲ್ಲಿ ಧ್ವಜ ವಂದನೆ ಮಾಡುವುದಕ್ಕೆ ವ್ಯವಸ್ಥೆ ಮಾಡಬೇಕಿದೆ. ಅಥವಾ ಇಲ್ಲದಿದ್ದರೆ ಧ್ವಜಾರೋಹಣ ಮಾಡಲು ಪರ್ಯಾಯ ವ್ಯವಸೆ ಮಾಡಬೇಕಾದ ಅನಿರ್ವಾಯತೆಯಿದೆ.
ಘಟನೆ ತಿಳಿದ ತಕ್ಷಣವೇ ಶಾಸಕ ಬಾಬಾಸಾಹೇಬ ಪಾಟೀಲ, ಉಪವಿಭಾಗಾಧಿಕಾರಿ ಪ್ರತಿಭಾ ಫಕ್ಕೀರಪುರ, ತಹಶೀಲ್ದಾರ ರವೀಂದ್ರ ಹಾದಿಮನಿ ಹಾಗೂ ಪಿಡಬ್ಲೂಡಿ ಎಇಇ ಸಂಜು ಮಿರಜಕರ, ಮತ್ತು ತಾಲೂಕಿನ ಎಲ್ಲ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.