ಮುಂಬರುವ ದಿನಗಳಲ್ಲಿ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದನೆ: ಲೋಣಿ ಭರವಸೆ
ವಿಜಯಪುರ,ಆ.4:ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ. ಹಾಗಾಗಿ ಬರುವ ಜಿ.ಪಂ., ತಾ.ಪಂ. ಚುನಾವಣೆಯ ದೃಷ್ಟಿಯಿಂದ ಪಕ್ಷವನ್ನು ಸದೃಢಗೊಳಿಸಲು ಎಲ್ಲರೂ ಅರ್ಪಣಾ ಮನೋಭಾವನೆಯಿಂದ ಶ್ರಮಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಕರೆ ನೀಡಿದರು.
ಶನಿವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಎಸ್.ಸಿ. ಘಟಕ ಜಿಲ್ಲಾ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದು ಆಶ್ವಾಸನೆ ನೀಡಿದ ಅವರು, ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಯ ಕುರಿತು ಈಗಿನಿಂದಲೇ ಪಕ್ಷದ ಕಾರ್ಯಕರ್ತರ ಜೊತೆಗೆ ಸಂಪರ್ಕ ವಹಿಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲ ತಾಲೂಕು ಅಧ್ಯಕ್ಷರುಗಳು ತುಂಬಾ ಜಾಗೃತರಾಗಿ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಇನ್ನೂ ಹೆಚ್ಚಿಗೆ ಪಕ್ಷವನ್ನು ಸದೃಢಗೊಳಿಸಬೇಕೆಂದು ಸಲಹೆ ನೀಡಿದರು.
ಬರುವ ದಿನಗಳಲ್ಲಿ ತಮ್ಮ ಬ್ಲಾಕ್ ಮಟ್ಟದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರವಾಸ ಕೈಗೊಳ್ಳಲಿದ್ದು ತಮ್ಮ ಬ್ಲಾಕ್ ಮಟ್ಟದ ಎಲ್ಲ ಪದಾಧಿಕಾರಿಗಳ ಸಭೆ ನಡೆಸಿ ತಯಾರಿ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ವಿಭಾಗದ ಜಿಲ್ಲಾ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಎಲ್ಲ ಪದಾಧಿಕಾರಿಗಳು ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸಲುವಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಸಂಜೀವ ಚವ್ಹಾಣ, ರಾಜು ಪವಾರ, ಸಿದ್ದು ತೋಟದ, ಡಿ. ಆರ್. ಸಂಕದ, ಕೃಷ್ಣಾ ಲಮಾಣಿ, ಯುವರಾಜ ಬಜಂತ್ರಿ, ಸಚಿನ ಹೊಸಮನಿ, ಪರಶುರಾಮ ಹೊಸಮನಿ, ನೂರು ಭೀಮು ಚವ್ಹಾಣ, ವಿಠ್ಠಲರಾಜ ಸಂಘಮನಿ, ಮಹಾದೇವ ಬನಸೋಡೆ, ಬಸವರಾಜ ಬಿಸನಾಳ, ರಾಜು ಕೂಚಬಾಳ, ಬಸವರಾಜ ತಾಳಿಕೋಟಿ, ರಾಘವೇಂದ್ರ ಪಡಸಾಲಿ, ಪ್ರದೀಪ ಚಮಲಾಪುರ, ಶಾಂತಪ್ಪ ಹೊಸಮನಿ, ಭಾರತಿ ಕಾಲೆಬಾಗ, ತುಕಾರಾಮ ಕಟ್ಟಿಮನಿ, ರಾಘವೇಂದ್ರ ವಡವಡಗಿ, ಅಪ್ಪಾಸಾಹೇಬ ಹೋಳಿನ, ಮಂಜುನಾಥ ಚಲವಾದಿ, ಪರಶುರಾಮ ವಾಲಿಕಾರ, ಭೀಮಪ್ಪ ಹರಿಜನ, ಸಿಂಧೂರ ಹರಿಜನ, ನಿಂಗಪ್ಪ ಆಲಗೂರ, ಪ್ರದೀಪ ಚಮಲಾಪುರ, ರಾಘವೇಂದ್ರ ಪಡಸಾಲಿ, ಬಸವರಾಜ ತಾಳಿಕೋಟಿ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.