ಖಾಸ್ಗತೇಶ್ವರಮಠಕ್ಕೆ ಇಂಗಳೇಶ್ವರ ಶ್ರೀಗಳ ಬೆಟ್ಟಿ
ತಾಳಿಕೋಟೆ:ಆ.4: ಇಂಗಳೇಶ್ವರ ವಚನ ಶಿಲಾ ಮಂಟಪದ ಪೀಠಾಧಿಪತಿಗಳಾದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಶನಿವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬೆಟ್ಟಿ ನೀಡಿ ಶ್ರೀಮಠದ ಉಸ್ತುವಾರಿಯಾದ ವೇ.ಮುರುಘೇಶ ವಿರಕ್ತಮಠ ಅವರೊಂದಿಗೆ ಚರ್ಚಿಸಿ ಶ್ರೀಮಠದ ಕಾರ್ಯವೈಖರ್ಯಗಳ ಕುರಿತು ಹಾಗೂ ಇತ್ತೀಚಗೆ ಜರುಗಿದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಕುರಿತು ಸಹ ವಿವರಣೆ ಪಡೆದರು.
ಇದೇ ಸಮಯದಲ್ಲಿ ಶ್ರೀಗಳನ್ನು ಕಂಡು ಕೆಲವು ವಿದ್ಯಾರ್ಥಿನಿಯರು ಶ್ರೀಗಳಿಗೆ ನಮಿಸಿ ಆಶಿರ್ವಾದ ಪಡೆಯಲು ಬಂದಾಗ ವಿದ್ಯಾರ್ಥಿನಿಯರಿಗೆ ಕಿವಿಮಾತನ್ನು ಹೇಳಿದ ಶ್ರೀಗಳು ದಯಮಾಡಿ ನಮ್ಮ ಭಾರತೀಯ ಸಂಸ್ಕøತಿಯನ್ನು ಅನುಸರಿಸುವದರೊಂದಿಗೆ ಮುಂದುವರೆಯಿರಿ ವಿದೇಶಿ ಸಂಸ್ಕಾರದತ್ತ ಗಮನ ಹರಿಸುವದು ಬೇಡಾ ವಿದೇಶಿ ಸಂಸ್ಕಾರ ನಮ್ಮ ಸಂಸ್ಕಾರವಲ್ಲಾ ನಮ್ಮ ಸಂಸ್ಕಾರ ಆದ್ಯಾತ್ಮವನ್ನು ಕಲಿಸುವ ಸಂಸ್ಕಾರವಾಗಿದೆ ಎಂದರು. ಇಂತಹ ಮಹತ್ವದ ಸಂಸ್ಕಾರದೊಂದಿಗೆ ಎಲ್ಲ ವಿದ್ಯಾರ್ಥಿಗಳು ಸಾಗಬೇಕು ದಿನನಿತ್ಯ ಪಠ್ಯಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಶಿಕ್ಷಕರು ಹೇಳಿದ ವಿಷಯವನ್ನು ಲಕ್ಷದಲ್ಲಿ ಇಟ್ಟುಕೊಂಡು ಸಾಗಿ ಪರಿಣಿತರಾಗಿ ಆದರ್ಶ ಗ್ರಹಿಣಿಯ ಸ್ಥಾನಮಾನಕ್ಕೆ ಮುಂದಾಗಿರಿ ಎಂದು ಕಿವಿಮಾತು ಹೇಳಿದರು.
ಇದು ಅಲ್ಲದೇ ಶ್ರೀಖಾಸ್ಗತ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿದ ಅನೇಕ ಹಿತನುಡಿ ವಿಚಾರಗಳನ್ನು ಬಣ್ಣಿಸಿದ ಶ್ರೀಗಳು ಸಿದ್ದಲಿಂಗ ದೇವರು ಸಿದ್ದಲಿಂಗ ದೇವರೇ ಆಗಿ ಪರಿಣಮಿಸಲಿದ್ದಾರೆ ಇವರು ಸಾಮಾನ್ಯ ವ್ಯಕ್ತಿಯಲ್ಲಾ ಯಾಕೆಂದರೆ ಅವರ ವಿಚಾರಧಾರೆ ಅವರು ತೆರಳಿದ ಕಾರ್ಯಕ್ರಮಗಳಲ್ಲಿಯ ಅವರ ಆಶಿರ್ವಚನವನ್ನು ಆಲಿಸಿದ ನಾನು ಆ ವಿಚಾರಗಳ ಕುರಿತು ಏಷ್ಟು ಬಣ್ಣಿಸಿದರೂ ಸಾಲದು ಎಂದರು. ಅಂತಹ ಮಹಾನ್ ವ್ಯಕ್ತಿಯನ್ನು ತಾವು ಜನ್ಮ ನೀಡಿ ತಾವು ಆದರ್ಶ ದಂಪತಿಗಳಾಗಿದ್ದೀರಿ ಅಂತಹ ಶ್ರೀಗಳು ಶ್ರೀಮಠದ ಇನ್ನಷ್ಟು ಹೆಚ್ಚಿಗೆ ಏಳೆಗೆಗೆ ತರುವದರಲ್ಲಿ ಯಾವ ಸಂಶಯವಿಲ್ಲಾವೆಂದು ಹೇಳಿದ ಶ್ರೀಗಳು ಬಾಲಶಿವಯೋಗಿಯ ನಡೆ, ನುಡಿ, ಅವರ ಚಿಕ್ಕವಯಸ್ಸಿನಲ್ಲಿ ಇರತಕ್ಕಂತಹ ನಡೆ ನುಡಿಗಳ ಕುರಿತು ಶ್ರೀಗಳು ತಮ್ಮ ಮೌಖಿಕ ವಿಚಾರದೊಂದಿಗೆ ಹೊಗಳಿದ್ದೇನು ಕಡಿಮೇನಿಲ್ಲಾ.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ವೇ.ವಿಶ್ವನಾಥ ವಿರಕ್ತಮಠ, ಶ್ರೀಮತಿ ಅಕ್ಕಮಹಾದೇವಿ ವಿರಕ್ತಮಠ, ಮೊದಲಾದವರು ಉಪಸ್ಥಿತರಿದ್ದರು.