ಸಂಗೀತ ಪರೀಕ್ಷೆ ತಾಳಿಕೋಟೆಯಲ್ಲಿ ನಡೆಸಲು ಒತ್ತಾಯಸಂಗೀತ ಕಲಾವಿದರಿಂದ ಪ್ರತಿಭಟನೆ ; ತಹಶಿಲ್ದಾರಗೆ ಮನವಿ
ತಾಳಿಕೋಟೆ:ಆ.4: ಪಟ್ಟಣದಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀ ಖಾಸ್ಗತೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ಸಂಗೀತ ಅಭಿಮಾನಿಗಳು ಅಂದ ಅನಾತ ಸಂಗೀತ ಪ್ರೇಮಿಗಳು ಒಳಗೊಂಡು ಶನಿವಾರರಂದು ಹಿಂದೂ ಸ್ತಾನಿ ಸಂಗೀತ ನೃತ್ಯ ತಾಳವಾದ್ಯ ಪರಿಕ್ಷೆಗಳನ್ನು ತಾಳಿಕೋಟೆಯಲ್ಲಿ ಈ ಹಿಂದಿನಂತೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುವದರೊಂದಿಗೆ ತಹಶಿಲ್ದಾರ ಕಚೇರಿಗೆ ತೆರಳಿ ಉನ್ನತ ಶಿಕ್ಷಣ ಸಚಿವರಿಗೆ, ಕರ್ನಾಟಕ ರಾಜ್ಯ ಕುಲಪತಿಯವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ನೀಡಿ ಆಗ್ರಹಿಸಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಪ್ರಾರಂಭಗೊಂಡ ಸಂಗೀತ ಕಲಾವಿದರ ಬೃಹತ್ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಕತ್ರಿ ಬಜಾರ ಮಾರ್ಗವಾಗಿ ಪ್ರಮುಖ ರಸ್ತೆಗುಂಟಾ ಹಾಯ್ದು ತಹಶಿಲ್ದಾರ ಕಚೇರಿಗೆ ಮೆರವಣಿಗೆ ಸ್ಥಗಿತಗೊಳಿಸಲಾಯಿತ್ತಲ್ಲದೇ ಈ ಮೇರವಣಿಗೆಯ ನೇತೃತ್ವ ವಹಿಸಿದ ಗವಾಯಿ ದೀಪಕಸಿಂಗ್ ಹಜೇರಿ ಅವರು ತಮ್ಮ ಅಪೇಕ್ಷೆತನವನ್ನು ಹೊರಹಾಕಿದರು. ಸುಮಾರು 1965 ನೇ ಸಾಲಿನಿಂದ ಶ್ರೀ ಖಾಸ್ಗತೇಶ್ವರ ಸಂಗೀತ ಪಾಠಶಾಲೆ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ನಡೆಸಿಕೊಂಡು ಬರಲಾಗಿದ್ದು ಸಂಗೀತ, ನೃತ್ಯ, ತಾಳವಾದ್ಯ ಪರಿಕ್ಷೆಗಳಾದ ಜೂನಿಯರ್ ಸೀನಿಯರ್ ಮತ್ತು ವಿದ್ವತ್ತ ಪಠ್ಯಕ್ರಮದ ಪ್ರಕಾರ 150 ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಈ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಶ್ರೀ ಖಾಸ್ಗತೇಶ್ವರ ಮಠದ ಲಿಂ.ಶಿವಬಸವ ದೇವರು, ಅಂದೀನ ಸಂಗೀತ ಶಿಕ್ಷಕ ಗವಾಯಿಗಳಾದ ಲಿಂ.ಪಿ.ಎ.ಸಾಲಿಮಠ ಗುರುಗಳ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗಿದ್ದ ಈ ಶಾಲೆ ಅಂದ ಅನಾತರಿಗೆ, ಅಂಗವಿಕಲರಿಗೆ, ಮತ್ತು ನಿರ್ಗತಿಕರಿಗೆ ಉಚಿತ ಊಟ ವಸತಿ ನೀಡುವದರೊಂದಿಗೆ ಸಂಗೀತ ವಿದ್ಯೆಯನ್ನು ನೀಡಿ ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ಮಾಡಿರುವದು ಇಡೀ ಇತಿಹಾಸದಲ್ಲಿಯೇ ಹೆಸರು ಮಾಡಿದೆ ಕಾರಣ ಈ ಎಂದಿನಂತೆ ತಾಳಿಕೋಟೆಯಲ್ಲಿಯೇ ಸಂಗೀತ ಪರಿಕ್ಷೆಗಳನ್ನು ನಡೆಸುವಂತೆ ಕೂಡಲೇ ಆದೇಶ ಮಾಡಬೇಕು ಒಂದು ವೇಳೆ ನಿರ್ಲಕ್ಷಭಾವನೆ ತೋರಿದರೆ ಸಂಗೀತ ಪ್ರೇಮಿಗಳ ತಾಳಿಕೋಟೆ ಭಾಗದ ಇತಿಹಾಸ ಡೋಲೊಮಾನವಾಗುವದರಲ್ಲಿ ಯಾವ ಸಂಶಯವಿಲ್ಲಾವೆಂದು ಅವರು ನುಡಿದರು.
ಇನ್ನೋರ್ವ ಸಂಗೀತ ಪ್ರೇಮಿಗಳಾದ ಕುಮಾರಿ ಸ್ವೇತಾ ಯರಗಲ್ಲ ಅವರು ಮಾತನಾಡಿ ತಾಳಿಕೋಟೆ ಪಟ್ಟಣವು ಸಂಗೀತ ಕ್ಷೇತ್ರದ್ಲಲ್ಲಿ ಮುಂದುವರೆದಿದೆ ಶ್ರೀ ಖಾಸ್ಗತೇಶ್ವರ ಕಾಲದಿಂದಲೂ ಈ ಭಾಗದಲ್ಲಿ ಅನೇಕ ಜನ ವಿದ್ಯಾರ್ಥಿಗಳು ಸಂಗೀತವನ್ನು ಕಲಿತು ಗವಾಯಿಗಳಾಗಿದ್ದಾರೆ ಅನೇಕ ಜನರು ಶಿಕ್ಷಕ ವೃತ್ತಿಯನ್ನು ಪಡೆದಿದ್ದಾರೆ ತಾಳಿಕೋಟೆ ಪರಿಕ್ಷಾ ಕೇಂದ್ರವನ್ನು ಕರ್ನಾಟಕ ಪ್ರೌಢ ಶಿಕ್ಷಣಾ ಪರಿಕ್ಷಾ ಮಂಡಳಿಯವರು ಸುಮಾರು 40 ವರ್ಷಗಳ ಕಾಲದಿಂದಲೂ ಪರಿಕ್ಷೆಯನ್ನು ನಡೆಸಿಕೊಂಡು ಬಂದಿರುವದು ಸ್ವಾಗತಾರ್ಹವಾಗಿದೆ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರ ಇವರ ಆಡಳಿತದಲ್ಲಿ ಈ ವರ್ಷದಿಂದ ಪರಿಕ್ಷೆ ನಡೆಸಲು ತಿರ್ಮಾನ ಕೈಕೊಂಡಿರುವ ನಿರ್ಣಯವನ್ನು ತಾಳಿಕೋಟೆ ಪರಿಕ್ಷಾ ಕೇಂದ್ರಕ್ಕೆ ಯಾವುದೇ ಮಾಹಿತಿ ನೀಡದೇ ಪರಿಕ್ಷಾ ಕೇಂದ್ರವನ್ನು ರದ್ದುಗೊಳಿಸಿರುವದು ಸರಿಯಾದ ತಿರ್ಮಾನವಲ್ಲಾವೆಂದು ಹೇಳಿದ ಅವರು ಅಂದ ವಿದ್ಯಾರ್ಥಿಗಳಿಗಾಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಈ ಸಂಗೀತ ಪರಿಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಈ ಕೈಕೊಂಡ ಕಾರಣದಿಂದ ತೊಂದರೆಯಾಗಲಿದೆ ಕಾರಣ ಮರಳಿ ತಾಳಿಕೋಟೆಯಲ್ಲಿಯೇ ಸಂಗೀತ ಪರಿಕ್ಷೆಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.
ಇದೇ ಸಮಯದಲ್ಲಿ ತಹಶಿಲ್ದಾರ ಕಚೇರಿಯ ಉಪಸ್ಥಿತ ಅಧಿಕಾರಿ ಮುನ್ನಾ ಅತ್ತಾರ ಅವರಿಗೆ ಸದರಿ ವಿಷಯ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ವಿವಿಧ ಸಂಬಂದಿತ ಇಲಾಖಾ ಅಧಿಕಾರಿಗಳ ಮನವಿ ಪತ್ರವನ್ನು ಶ್ರೀ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ಅಧ್ಯಕ್ಷ ವೇ.ಮುರುಘೇಶ ವಿರಕ್ತಮಠ ಹಾಗೂ ಪ್ರಾಚಾರ್ಯರಾದ ಬಸನಗೌಡ ಬಿರಾದಾರ ಅವರು ಸಲ್ಲಿಸಿದರು.
ಈ ಸಮಯದಲ್ಲಿ ಮುದ್ದೇಬಿಹಾಳದ ಹಿರಿಯ ಸಂಗೀತಗಾರರಾದ ಸಂಗಮೇಶ ಶಿವಣಗಿ, ಆಮತ್ತಯ್ಯ ಹಿರೇಮಠ, ಹಣಮಂತ ಬಳಗಾನೂರ, ವಿರೇಶ ಬಳಿಗಾರ, ವಿನೋದಕುಮಾರ ಚಿಕ್ಕಮಠ, ಈಶ್ವರ ಬಡಿಗೇರ, ನಾಗರಾಜ ಕೊಡೇಕಲ್ಲ, ಕಾಶಿನಾಥ ಕಾರಗನೂರ, ಅಂಬ್ರೇಶ ಇಂಗಳಗಿ, ಯಲ್ಲಪ್ಪ ಗುಂಡಳ್ಳಿ, ಪರಶುರಾಮ ಚಿಟ್ನಳ್ಳಿ, ಕುಮಾರ ಕುದರಗುಂಡ, ದೇವರಾಜ ಯರಕ್ಯಾಳ, ಸುರೇಶ ಹೂಗಾರ, ಗೋವಿಂದಸಿಂಗ್ ಹಜೇರಿ, ಮಹಾಂತೇಶ ಪಡೇಕನೂರ, ಮಹಾಂತೇಶ ಚಣಮಗೇರಿ, ಪರಶುರಾಮ ಚಬನೂರ, ವಿಶ್ವನಾಥ ಸರೋದೆ, ಮಲ್ಲಿಕಾರ್ಜುನ ನಾವಿ, ರಾಜು ಗುಬ್ಬೇವಾಡ, ಪ್ರವೀಣ ಪತ್ತಾರ, ರೀಯಾಜ ಮುಲ್ಲಾ, ಶರಣಕುಮಾರ ಯಾಳಗಿ, ಬಸನಗೌಡ ಮಾಲಿಪಾಟೀಲ, ಹುಣಸಗಿಯ ಗುರು ಬಿರಾದಾರ, ವಿಜಯಲಕ್ಷ್ಮೀ ಹಿರೇಮಠ, ಶಾರದಾ ಹಿರೇಮಠ, ಪದ್ಮಾವತಿ, ಭೀಮಾಬಾಯಿ ಕೋರಿ, ಬಸಮ್ಮ ಹಿರೇಮಠ, ಕವಿತಾ ದನ್ನೂರ, ಮೊದಲಾದವರು ಪಾಲ್ಗೊಂಡಿದ್ದರು.