ಪರವಾನಗಿ ಪಡೆಯದ ಅನಧಿಕೃತ  ಫ್ಲೆಕ್ಸ್ ಬೋರ್ಡ್ ಗಳ ತೆರವು
ಸಂಜೆವಾಣಿ ವಾರ್ತೆ
ಹರಿಹರ ಆ.೪; ನಗರಸಭೆಯಿಂದ ಪರವಾನಿಗೆ  ಪಡೆಯದೆ  ಮುಖ್ಯ ವೃತ್ತಗಳಲ್ಲಿ ಹಾಕಿರುವಂತ ಫ್ಲೆಕ್ಸ್ ಬೋರ್ಡ್ ಗಳನ್ನು ಆಯುಕ್ತ ಸುಬ್ರಮಣ್ಯ ಪಿ ನಗರಸಭಾ ಆರೋಗ್ಯ ನಿರೀಕ್ಷಕರ ತಂಡ ತೆರವು ಕಾರ್ಯಚರಣೆಯ ಮುಂದಾದರು.ಈ ಸಂದರ್ಭದಲ್ಲಿ ಆಯುಕ್ತರ ಮಾತನಾಡಿ ಅನಧಿಕೃತವಾಗಿ ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಭಿತ್ತಿ ಪತ್ರಗಳಿಂದ ಅಂದಗೆಟ್ಟಿದ್ದ ನಗರದಲ್ಲಿ  ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತದೆ ರಾಜಕೀಯ ಪಕ್ಷಗಳು, ಸಂಘ, ಸಂಸ್ಥೆಗಳು ನಗರ ಸಭೆಯಿಂದ ಅನುಮತಿ ಪಡೆಯದೇ ಅಕ್ರಮವಾಗಿ ನಗರದ ನಾನಾ ಕಡೆಗಳಲ್ಲಿ ಫ್ಲೆಕ್ಸ್ ಹಾಗೂ ಜನ್ಮ ದಿನದ ಶುಭಾಷಯ ಕೋರುವ ಭಿತ್ತಿಪತ್ರಗಳನ್ನು ಸರಕಾರಿ ಕಚೇರಿ ಗೋಡೆ, ಕಾಂಪೌಂಡ್ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುತ್ತದೆ . ಇದರಿಂದ ನಗರಸಭೆ ಆದಾಯ ಮತ್ತು ಸೌಂದರ್ಯವನ್ನು ಹಾಳು ಹಾಳು ಮಾಡುತ್ತಿದ್ದಾರೆ  ನಗರಸಭೆಯಿಂದ ಪರವಾನಿಗೆ ಪಡೆಯದೆ  ಅನಧಿಕೃತ ಫ್ಲೆಕ್ಸ್ ಬೋರ್ಡುಗಳನ್ನು  ಯಾವುದೇ ಮುಲಾಜಿಲ್ದಲೇ ನಗರಸಭೆಯಿಂದ ತೆರವುಗೊಳಿಸಿ  ಕಾನೂನು ರೀತಿ ಕ್ರಮಗೊಳಿಸಲಾಗುವುದು ಎಂದರು  ಇನ್ನು ಮುಂದೆ ಯಾವುದೇ ಫ್ಲೆಕ್ಸ್ ಬೋರ್ಡ್ ಗಳನ್ನು ಅಳವಡಿಸಬೇಕಾದರೆ ನಗರಸಭೆಯಿಂದ ಪರವಾನಿಗೆಯನ್ನು  ಪಡೆದು ಅಳವಡಿಸತಕ್ಕದ್ದು ಎಂದು ತಿಳಿಸಿದರು.ಹಿರಿಯ  ಆರೋಗ್ಯ ಸಂತೋಷ್ ನಾಯ್ಕ್. ನಗರಸಭೆ ಆರೋಗ್ಯ ಇಲಾಖೆಯ ಟ್ರೈನರ್ ಸೌಜನ್ಯ. ಅಬ್ದುಲ್ ರೆಹಮಾನ್. ನಗರಸಭೆ ಸಿಬ್ಬಂದಿ ಪೌರಕಾರ್ಮಿಕರು ತೆರವು ಕಾರ್ಯಚರಣೆಯಲ್ಲಿ ಇದ್ದರು.