ವೀರಭದ್ರೇಶ್ವರ ದೇವಸ್ಥಾನದಲ್ಲಿ ಪುರಾಣ ನಾಳೆಯಿಂದ ಆರಂಭ
ವಾಡಿ:ಆ.4: ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ಪ್ರಸಿದ್ಧ ಐತಿಹಾಸಿಕ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ವೀರಭದ್ರೇಶ್ವರ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಮುನೀಂದ್ರ ಶಿವಾಚಾರ್ಯರ ತಿಳಿಸಿದ್ದಾರೆ.
ಈ ಕುರಿತು ಹಳಕರ್ಟಿ ಗ್ರಾಮದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರಾವಣ ಮಾಸ ಸೋಮವಾರದಿಂದ ಆರಂಭವಾಗುತ್ತಿದ್ದು ಅಂದು ಸಂಜೆ ಸಂತ ಶಿಶುನಾಳ ಶರೀಫರ ಮಹಾ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಆ.5 ರಂದು ಸೋಮವಾರ ರಾತ್ರಿ 10.30 ಕ್ಕೆ ಉದ್ಘಾಟನೆಗೊಂಡು ಪ್ರತಿ ದಿನ ಸಂಜೆ ಮಹಾಪುರಾಣ ಜರುಗುವುದ ನಂತರ ಸೆ.3 ಕ್ಕೆ ಸಮರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಲೋಕ ಕಲ್ಯಾಣಕ್ಕಾಗಿ ಮುನಿಂದ್ರ ಸ್ವಾಮಿಗಳಿಂದ ತಿಂಗಳ ಪರಿಯಂತ ಇಷ್ಟಲಿಂಗ ಪೂಜೆ, ಸಂಜೆ 6. ಗಂಟೆಯವರೆಗೆ ಜರುಗಲಿದೆ. ಜೊತೆಗೆ ಶ್ರೀಗಳ ಪಾದಪೂಜೆ ಸಹ ಜರುಗಲಿದೆ ಎಂದು ತಿಳಿಸಿದರು.
ಕೋಮು ಸೌಹಾರ್ದತೆ ಪಾಠ ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿದೆ. ಇಂದು ಹಿಂದೂ-ಮುಸ್ಲಿಂ ಎನ್ನುವ ಭೇದ ಎಣಿಸದೆ ಎಲ್ಲರೂ ಶಾಂತಿ ಸಹೋದರಂತೆ ಹಾಗೂ ಸಹ ಬಾಳ್ವೆಯಿಂದ ಜೀವನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂತ ಶಿಶುನಾಳ ಶರೀಫರ ಜೀವನವೇ ಒಂದು ಪಾಠವಾಗಿದೆ. ಶರೀಫರ ಜೀವನ ಮೌಲ್ಯ ಸಾರುವ ದೃಷ್ಟಿಯಿಂದ ಶಿಶುನಾಳ ಶರೀಫರ ಜೀವನ ಚರಿತ್ರೆಯನ್ನು ವಿಷಯವಾಗಿಟ್ಟುಕೊಂಡು ಪುರಾಣ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪಂಡಿತ್ ವಿರುಪಾಕ್ಷಿ ಗವಾಯಿಗಳಿಂದ ಪ್ರವಚನ ನಡೆಯಲಿದ್ದ,
ಮದರಿ ಪ್ರಭುಲಿಂಗ ಗವಾಯಿಗಳಿಂದ ಸಂಗೀತ ಸೇವೆ ಹಾಗೂ ಲಕ್ಷ್ಮಣ ಹೇರೂರ ತಬಲಾ ಸೇವೆ ನೀಡಲಿದ್ದಾರೆ. ಶ್ರೀವೀರೇಶ್ವರ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಚಂದ್ರಕಾಂತ ಮೇಲಿನಮನಿ, ಮುಖಂಡರಾದ ರಾಜುಗೌಡ ಪೆÇಲೀಸ್ ಪಾಟೀಲ, ಮಲ್ಲು ಪೂಜಾರಿ, ಸಿದ್ದು ಮುಗಟಿ, ಮಹ್ಮದ್ ಚಿತಾವಲಿ ತಾಳಿಕೋಟಿ, ಪ್ರಕಾಶ ಚಂದನಕೇರಿ, ಭೀಮಾಶಂಕರ ನಾಲವಾರ, ಇಬ್ರಾಹಿಂ ಖುರೇಶಿ ರಾಚಯ್ಯ ಶಾಸ್ತ್ರಿ ಇದ್ದರು.