ಪುಷ್ಯರ್ಕ ಯೋಗ ವಿಶೇಷ ಶ್ರೀ ರಾಯರ ಸ್ತೋತ್ರ ಪಾರಾಯಣ
ಕಲಬುರಗಿ:ಆ.4:ಹಳೆ ಜೀವರ್ಗಿ ರಸ್ತೆ ಗಣೇಶ್ ನಗರದ ಸಿದ್ದಿ ಹನುಮಾನ್ ದೇವಸ್ಥಾನ ಹತ್ತಿರ
ಪುಷ್ಯರ್ಕ ಯೋಗದ ನಿಮಿತ್ಯ ಶ್ರೀಹಂಸನಾಮಕ, ಶ್ರಲಕ್ಷ್ಮಿನಾರಾಯಣ ಹಾಗು ಹರೇ ಶ್ರೀರಾಮ ಪಾರಾಯಣ ಸಂಘಗಳ ವತಿಯಿಂದ 108 ಬಾರಿ ಶ್ರೀಗುರು ರಾಘವೇಂದ್ರ ಸ್ತೋತ್ರದ ಪಠಣ ಮಾಡಲಾಯಿತು.
ಪಾರಾಯಣ ಸಂಘದ ಅಧ್ಯಕ್ಷರಾದ ಶ್ರೀ ಜಗನ್ನಾಥ ಆಚಾರ್ಯ ಮಾತನಾಡಿ ಪುಷ್ಯ ನಕ್ಷತ್ರದ ದಿನ ಗುರುಗಳ ಆಶೀರ್ವಾದ ಪಡೆಯಲು ಶುಭ ದಿನವಾಗಿದೆ
ರಾಘವೇಂದ್ರ ಸ್ತೋತ್ರವನ್ನು 108 ಬಾರಿ ಪಠಿಸುವುದರಿಂದ ರಾಯರು ನಮಗೆ ಸದಾ ಆನಂದವನ್ನು ನೀಡುತ್ತಾರೆ ಹಾಗೂ ಸನ್ಮಾರ್ಗದಲ್ಲಿ ನಡೆಸುತ್ತಾರೆ ಶ್ರೀ ರಾಘವೇಂದ್ರ ಸ್ವಾಮಿಗಳು ಅನುಗ್ರಹ ಸದಾ ನಮ್ಮ ಮೇಲಿರುತ್ತದೆ ಎಂದರು.
ಪಾರಾಯಣ ಸಂಘದ ಪ್ರಮುಖರಾದ ರಾಮಾಚಾರ್ಯ ನಗನೂರು,ನರಸಿಂಗರಾವ್ ಕುಲಕರ್ಣಿ, ಅನಿಲ್ ಕುಲಕರ್ಣಿ,ಶೇಷಮೂರ್ತಿ ಅವಧಾನಿ, ವಿನುತ ಜೋಶಿ, ಪಿ ಬಿ ಜೋಶಿ, ಕೃಷ್ಣಾಚಾರ್ಯ ಕುಲಕರ್ಣಿ, ಅರ್ ಕೆ ಕುಲಕರ್ಣಿ, ಲಕ್ಷ್ಮಣರಾವ್ ಕುಲಕರ್ಣಿ, ನಾರಯಣಚಾರ್ಯ ಓಂಕಾರ, ಸಂತೋಷ್ ಕುಲಕರ್ಣಿ, ನಿಖಿಲ್ ನಿಂಬರ್ಗಿಕರ್, ಪ್ರವೀಣ ಓಂಕಾರ್, ಜಯತೀರ್ಥ ಶರ್ಮಾ,ಗಿರೀಶ್ ಕುಲಕರ್ಣಿ, ಗುರುರಾಜ್ ಹಾಲಾವಿ, ಗುಂಡೇರಾವ್ ಕುಲಕರ್ಣಿ ಇದ್ದರು.