ಜಿ.ಪಂ ಸಿ.ಇ.ಒ ವರ್ಗಾವಣೆ ಮಾಡದಿದ್ದರೆ 12ರಂದು ಪ್ರಿಯಾಂಕ ಖರ್ಗೆ ಪ್ರತಿಕೃತಿ ದಹನ: ವಾಲದೊಡ್ಡಿ
ಬೀದರ್: ಆ.4:ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ದಿಲೀಪ ಬದೋಲೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಈ ತಿಂಗಳ 12ರೊಳಗೆ ವರ್ಗಾವಣೆ ಮಾಡದಿದ್ದರೆ ರಾಜ್ಯದ ಗ್ರಾಮಣಾಭಿವೃದ್ಧಿ ಹಾಗೂ ಪಂಚಾಯತರಾe ಸಚಿವ ಪ್ರಿಯಾಂಕ ಖರ್ಗೆ ಅವರ ಪ್ರತಿಕೃತಿ ದಹಿಸಲಾಗುವುದೆಂದು ಕರ್ನಾಟಕ ಭೀಮ ಸೇನೆ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ ವಾಲದೊಡ್ಡಿ ಹೇಳಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕೊಳಾರ್ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಕುಮದಾ ಅವರು ಮೇಲ್ಜಾತಿಯವರು ಎಂಬ ಮಾತ್ರಕ್ಕೆ ಭ್ರಷ್ಟಾಚಾರದಲ್ಲಿ ತೊಡಗಿರುವ ಪಿ.ಡಿ.ಒ ಬೆನ್ನಿಗೆ ಸಿ.ಇ.ಒ ನಿಂತಿದ್ದಾರೆ ಎಂಬುದು ತಾ.ಪಂ ಇ.ಒ ಮಾಡಿರುವ ವರದಿಯಿಂದ ಗೊತ್ತಾಗುತ್ತಿದೆ. 26 ನವೆಂಬರ್ 2023ರಂದು ಕೊಳಾರ್ ಗ್ರಾಮ ಪಂಚಾಯತನಲ್ಲಿ ಕಾಟಾಚಾರಕ್ಕೆ ಸಂವಿಧಾನ ದಿನಾಚರಣೆ ನಡೆಸಿ ನಂತರ ಭಾವಚಿತ್ರ ಒಂದೆ ಗಂಟೆಯಲ್ಲಿ ಡಿಲಿಟ್ ಮಾಡುವ ಮೂಲಕ ದೆಶದ್ರೋಹಿ ಚಟುವಟಿಕೆಯಲ್ಲಿ ಅಲ್ಲಿನ ಪಿ.ಡಿ.ಒ ಭಾಗಿಯಾಗಿದ್ದಾರೆ. ನಿಜಾಂಪುರ, ಹಜ್ಜರಗಿ, ಕಮಲಪುರ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಮನೋಭಾವ ಬೆಳೆಸಲು ಸುಮಾರು 6 ಕ್ಷ ವೆಚ್ಚದಲ್ಲಿ ಟೆಂಡರ್ ಇಲ್ಲದೇ ಖರಿದಿಸಲಾದ ಕ್ರೀಡಾ ಸಾಮಾನುಗಳು ಕಾಣೆಯಾಗಿವೆ. ನರೆಗಾ ಯೋಜನೆಯಡಿ ಅಮೃತ ಗ್ರಾಮ ಯೋಜನೆ ಅಡಿ ತಾಲೂಕಿನ ಬೆಳ್ಳೂರ್ ಗ್ರಾಮದ ಕೆರೆ ಸೌಂದರ್ಯಕ್ಕಾಗಿ 5 ಲಕ್ಷ ಹಣ ದುರ್ಬಲಿಕೆ ಮಾಡಿರುತ್ತಾರೆ. ನಿಜಾಂಪುರ ಗ್ರಾಮದ ಸರ್ವೆ ನಂ. 3/2 ಸರ್ಕಾರಿ ಜಾಗದಲ್ಲಿ ಪಿ.ಡಿ.ಒ ಮ್ಯಾನವಲ್ ಖಾತಾ ನೀಡಿರುತ್ತಾರೆ ಎಂದರು.
30 ಜುಲೈ 2023ರಂದು ತಾಲೂಕಿನ ಬಕಚೌಡಿ ಗ್ರಾಮದ ಪರಿಶಿಷ್ಟ ಜಾತಿ ಜನರಿಗೆ ಕಲುಶಿತ ನೀರು ಪೊರೈಕೆ ಮಾಡಿರುವುದರಿಂದ 14 ಜನರಿಗೆ ವಾಂತಿ-ಭೇದಿಯಾಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಎಸ್.ಸಿ ಜಾತಿ ಓಣಿಗಳಿಗೆ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಹಾಗೂ ಚರಂಡಿ ಸ್ವಚ್ಛತೆ ಮಾಡಿರುವುದಿಲ್ಲ ಎಂದು ಅಲ್ಲಿಯ ಪರಿಶಿಷ್ಟ ಪಂಗಡಕ್ಕೆ ಸೇರಿದ ಪಿ.ಡಿ.ಒ ಪ್ರಕಾಶ ಅವರನ್ನು ಮಾನತ್ತು ಮಾಡಲಾಗಿದೆ. ಬೆಳ್ಳುರ್ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಓಪನ್ ಪ್ಲಾಟ್‍ನ್ನು ಬೇರೊಬ್ಬರ ಹತ್ತಿರ ಹಣ ಪಡೆದು ಅವರ ಹೆಸರಿಗೆ ದಾಖಲಾತಿ ಮಾಡಿ ಕೊಟ್ಟಿರುತ್ತಾರೆ. ಇದರಿಂದ ನಿಜವಾದ ಪ್ಲಾಟ್ ಮಾಲಿಕ ಎಮ್.ಡಿ ಶರೀಫ್ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೊಪಿಸಿದರು.
ನಿಜಾಂಪುರ ಗ್ರಾಮದ ಸರ್ವೆ ನಂ 46/2 ವಿಸ್ತಿರ್ಣ 1 ಎಕರೆ 15 ಗುಂಟೆ ಜಮಿನಿನಲ್ಲಿ ಕೇವಲ 6 ಗುಂಟೆ ಜಮಿನನ್ನು ಭೂ ಪರಿವರ್ತನೆ ಮಾಡಿರುವ ಆದೇಶ ಇದ್ದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪೂರ್ಣ ಅಂದರೆ 1 ಎಕರೆ 15 ಗುಂಟೆ ಜಮಿನಿಗೆ ಡಿಜಿಟಲ್ ಖಶಾತೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳ ಆದೇಶ ಗಾಳಿಗೆ ತೂರಲಾಗಿದೆ ಎಂದು ಅವರು ದೂರಿದರು.
ಕೊಳಾರ್(ಕೆ) ಗ್ರಾಮದ ಸರ್ವೆ ನಂ. 340/1ರಲ್ಲಿ 15 ಗುಂಟೆ ಜಮಿನಿನ ಖಾತಾಗಳು ಗ್ರಾ.ಪಂ ಸದಸ್ಯರ ಗಮನಕ್ಕೆ ತರದೆ ವಿತರಿಸಲಾಗಿದೆ.
ಕೊಳಾರ್(ಕೆ) ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಕುಮದಾ ಅವರು ಇಷ್ಟೆಲ್ಲ ಭ್ರಷ್ಟಾಚಾರ ಎಸಗಿದ್ದರೂ ಅವರ ವಿರೂದ್ಧ ಜಿ.ಪಂ ಸಿ.ಇ.ಒ ಗಿರೀಶ ಬದೋಲೆ ಯಾವುದೇ ಕ್ರಮ ಜರುಗಿಸದೇ ಇರುವುದು ದೊಡ್ಡ ದುರಂತ. ಹಾಗಾಗಿ ಈ ತಿಂಗಳ 12ರೊಳಗೆ ಪಿ.ಡಿ.ಒ ಕುಮದಾ ಅವರನ್ನು ಅಮಾನತ್ತು ಮಾಡಬೇಕು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ವಾಲದೊಡ್ಡಿ ಆಗ್ರಹಿಸಿದರು.
ಡಿಗಂಬರ ಪುಂಗೆ, ವಿಶಾಲ ಕರಂಜೆ, ಅಮೃತ ಮುತ್ತಂಗಿಕರ್, ರಾಹುಲ ಡಾಂಗೆ, ರವಿ ಭುಸಂಡೆ, ಶ್ರೀನಿವಾಸ ಪೂಜಾರಿ, ಸೋನುರಾವ, ಶರೀಫ್ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.