860 ಜನರಿಗೆ ಜಿಐ ಟ್ಯಾಗ್ ಅಧಿಕೃತ ಬಳಕೆದಾರರ ಪ್ರಮಾಣ ಪತ್ರ ವಿತರಣೆ
ಆಳಂದ:ಆ.4: ಹೆಚ್ಚು ಹೆಚ್ಚು ರೈತರು, ರೈತ ಗುಂಪುಗಳು, ದಾಲ ಮಿಲ್ಲರ್ ಗಳು ಜಿಐ ಟ್ಯಾಗ್ ಅಧಿಕೃತ ಬಳಕೆದಾರರಾಗಿ ನೊಂದಾಯಿಸಿಕೊಂಡು ಅದರಿಂದ ಲಾಭ ಪಡೆದುಕೊಳ್ಳಬೇಕು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಐಪಿಆರ್ ಕೋಶದ ಮುಖ್ಯಸ್ಥರು ಹಾಗೂ ಡಾ. ಜಯಪ್ರಕಾಶ್ ನಿಡಗುಂದಿ ಹೇಳಿದರು.
ಆಳಂದ ರಸ್ತೆಯ ಕೆವಿಕೆಯಲ್ಲ್ಲಿ ಆಯೋಜಿಸಿದ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಮತ್ತು ಪಲ್ಸಸ್ ಡೆವಲಪ್ಮೆಂಟ್ ಬೋರ್ಡ್ ಮತ್ತು ಕೃಷಿ ಇಲಾಖೆ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ಜಿ.ಐ. ಟ್ಯಾಗ್ ಪಡೆದಿರುವ ಗುಲ್ಬರ್ಗ ತೊಗರಿ ಬೇಳೆಯ ವಾಣಿಜ್ಯ ಬಳಕೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಸುಮಾರು 860 ಜನರಿಗೆ ಜಿಐ ಟ್ಯಾಗ್ ಅಧಿಕೃತ ಬಳಕೆದಾರರ ಪ್ರಮಾಣ ಪತ್ರ ದೊರೆತಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬೇಕೆಂದು ಅವರು ಹೇಳಿದರು.
ಪಲ್ಸಸ್ ಡೆವಲಪ್ಮೆಂಟ್ ಬೋರ್ಡ್‍ನ ವ್ಯವಸ್ಥಾಪಕ ನಿರ್ದೇಶಕ ಆಂತೋನಿ ಇವರು ಭೀಮ ಬ್ರಾಂಡ್ ತೊಗರಿ ಬೇಳೆಯ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ರೈತರ ಉತ್ಪಾದಕ ಗುಂಪುಗಳು ಪಲ್ಸಸ್ ಬೋರ್ಡ್ ಜೊತೆ ಕೈಜೋಡಿಸಿ ಗುಲ್ಬರ್ಗ ತೊಗರಿ ಬೇಳೆಯನ್ನು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಹಾಗೂ ಇಲ್ಲಿನ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ಪ್ರವೃತರಾಗಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಅಧಿಕೃತ ಬಳಕೆದಾರರ ಪ್ರಮಾಣ ಪತ್ರ ಅರ್ಹತೆ ಹೊಂದಿರುವ ಹದಿನಾಲ್ಕು ರೈತ ಉತ್ಪಾದಕರ ಗುಂಪುಗಳ ಪ್ರತಿನಿಧಿಗಳು , ತೊಗರಿ ದಾಲ್ ಮಿಲ್ಲರ್‍ಗಳು, ಪ್ರಗತಿಪರ ರೈತರು ಹಾಗೂ ವಿಜ್ಞಾನಿಗಳು ಸೇರಿದಂತೆ ಸುಮಾರು ಐವತ್ತು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪ್ರವೀಣ್ ಮಾಲಿಕ್, ಸಿಇಓಅಗ್ರಿ ಇನೋವೆಟ್ ಇಂಡಿಯಾ, ಮಿನಿಸ್ಟ್ರಿ ಆಫ್ ಅಗ್ರಿಕಲ್ಚರ್ ಮತ್ತು ಫಾರ್ಮರ್ಸ್ ವೆಲ್ಫೇರ್, ನವದೆಹಲಿ ಮತ್ತು IಅಖISಂಖಿ ಹೈದರಾಬಾದ್ ಸಂಸ್ಥೆಯ ಡಾ. ಸೂರ್ಯಮಣಿ ತ್ರಿಪಾಠಿ ಇವರು ಭಾಗವಹಿಸಿ ಜಿಐಟ್ಯಾಗ್ ತೊಗರಿ ಬೆಳೆಯ ವಾಣಿಜ್ಯ ಬಳಕೆ ಕುರಿತು ಅನೇಕ ವಿಷಯಗಳನ್ನು ಚರ್ಚಿಸಿದರು. ಅಲ್ಲದೆ, ಮುಂದಿನ ಕಾರ್ಯ ಯೋಜನೆ ಹಾಗೂ ಸಂಭವಿಸಬಹುದಾದ ಅಡೆತಡೆಗಳ ನಿವಾರಿಸಿಕೊಳ್ಳುವ ಬಗ್ಗೆ ವಿವರಿಸಿದರು.
ಡಾ. ಬಿ.ಎಂ. ದೊಡ್ಡಮನಿ ಸಹ ಸಂಶೋಧನಾ ನಿರ್ದೇಶಕರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆವಿಕೆ ಮುಖ್ಯಸ್ಥ ಡಾ. ರಾಜು ತೆಗ್ಗೆಳ್ಳಿ ಇವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮ ಹಿರಿಯ ವಿಜ್ಞಾನಿ ಡಾ. ಮುನಿಸ್ವಾಮಿ ನಿರೂಪಿಸಿದರು. ವಿಜ್ಞಾನಿಗಳಾದ ಡಾ. ಬಿ.ಎಸ್.ರೆಡ್ಡಿ , ಡಾ. ಎಸ್ ಬಿ ಯೇರಿ, ಡಾ.ಬಸವರಾಜ್ ಮತ್ತು ಕೆ ವಿ ಕೆ ವಿಜ್ಞಾನಿಗಳು ಭಾಗವಹಿಸಿದ್ದರು. ಪಲ್ಸಸ್ ಬೋರ್ಡ್‍ನ ಕೃಷಿ ಸಹಾಯಕ ನಿರ್ದೇಶಕ ವಿಶಾಲ್ ಮತ್ತು ಶ್ರೀಮತಿ ಕವಿತಾ ಇವರು ಭಾಗವಹಿಸಿದ್ದರು.
ಅರ್ಹತೆ ಪಡೆದಿರುವ ರೈತ ಉತ್ಪಾದಕ ಗುಂಪುಗಳ ಮುಖ್ಯಸ್ಥರಿಗೆ ಹಾಗೂ ದಾಲ್ ಮಿಲ್ಲರ್ ಗಳಿಗೆ ಅಧಿಕೃತ ಬಳಕೆದಾರರ ಪ್ರಮಾಣ ಪತ್ರ ವಿತರಿಸಲಾಯಿತು.