ನಾಲವಾರ ಬಳಿ ಸರಣಿ ಅಪಘಾತ: ಹಲವರಿಗೆ ಗಾಯ
ವಾಡಿ:ಆ.4: ಚಿತ್ತಾಪುರ ನಾಲವಾರ ಸಮೀಪದ ಕುಂಬಾರಹಳ್ಳಿ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಶುಕ್ರವಾರ ಸಂಜೆ ಸರಣಿ ಅಪಘಾತ ನಡೆದಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದ ಕಲಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದೇ ಕುಟುಂಬಕ್ಕೆ ಸೇರಿದ್ದ ಕಲಬುರ್ಗಿ ನಿವಾಸಿಗಳಾದ ತುಳಜಮ್ಮ ಗಂಡ ಕೇಶವ್ ಜೋಕೆ (55), ಶರಣಮ್ಮ ಕುದುರಿ (45), ಮಲ್ಲಮ್ಮ ಗಂಡ ನಾಗಪ್ಪ ಕುದುರಿ (35), ಶಂಕ್ರಮ್ಮ ಯಂಕಂಚಿ (38), ಶಿವರಾಜ ತಂದೆ ದೇವಿಂದ್ರ (20), ದೇವೇಂದ್ರ ತಂದೆ ಭೀಮರಾಯ ಯಂಕಂಚಿ (44), ಪ್ರಸಾದ್ ಬಾಬು ಸೋಮಯ್ಯ (38), ಯಲ್ಲಪ್ಪ ಯಳವರ (53), ಭೀಮರಾಯ ತಂದೆ ರಾಮಣ್ಣ ಮಲಕಪ್ಪನಹಳ್ಳಿ ಯಾದಗಿರಿ (27) ಎನ್ನುವÀರಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಕಲಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಾದಗಿರಿಯಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಗೂಡ್ಸ್ ಲಾರಿ ಶನಿವಾರ ಮಧ್ಯಾಹ್ನ ಕುಂಬಾರಹಳ್ಳಿ ಬಸ್ ಸ್ಟಾಂಡ್ ಹತ್ತಿರ ಜನನಿ ಬೀಡ ಪ್ರದೇಶದಲ್ಲಿ ವೇಗವಾಗಿ ನುಗ್ಗಿದ್ದ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಲಾರಿ ಚಾಲಕ ಕುಡಿದ ಮತ್ತಿನಲ್ಲಿದ್ದ ಎಂದು ಹೇಳಲಾಗುತ್ತಿದೆ. ನಿಂತಿದ್ದ ಬೊಲೆರೋ ವಾಹನಕ್ಕೆ ಹಾಗೂ ಐದು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐದು ಜನರಿಗೆ ಗಂಭೀರ ಗಾಯಗಳಾಗಿದ್ದು ಕಲಬುರ್ಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಶಹಾಬಾದ ಡಿವೈಎಸ್‍ಪಿ ಶಂಕರಗೌಡ ಪಾಟೀಲ ಭೇಟಿ ನೀಡಿ ಗಾಯಳುಗಳನ್ನು ಆಸ್ಪತ್ರೆಗೆ ಕಳುಹಿಸಿ ಕೊಡುವ ಮೂಲಕ ನೆರವಾದರು. ವಾಡಿ ಠಾಣೆಯ ಪಿಎಸ್‍ಐ ತಿರುಮಲೇಶ. ಕೆ. ಟ್ರಾಫಿಕ್ ನಿಯಂತ್ರಿಸಿ ಪರಿಸ್ಥಿತಿ ತಿಳಿಗೊಳಿಸಿದರು.