ಪೌಷ್ಟಿಕ ಆಹಾರ ಸೇವನೆಯಿಂದ ಅನಾರೋಗ್ಯ ದೂರ: ಬುಳ್ಳಾ
ವಾಡಿ:ಆ.4: ನಾವು ದಿನನಿತ್ಯ ಸೇವಿಸುವ ಆಹಾರ ಪೌಷ್ಟಿಕತೆಯಿಂದ ಕೂಡಿದರೆ ಅನಾರೋಗ್ಯ ದೂರವಾಗಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದು ಆರೋಗ್ಯ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ ಹೇಳಿದರು.
ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಮರವಾಡಿ ಉಪ ಕೇಂದ್ರದ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನಪಾನ ದಿನಾಚರಣೆ, ಕುಷ್ಠ ರೋಗ ನಿರ್ಮೂಲನೆ ಹಾಗೂ ಪೌಷ್ಠಿಕ ಶಿಬಿರ ಆಚರಣೆಯ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಗುಣಮಟ್ಟದ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಯಾಗಿ ರೋಗಗಳು ದೂರವಾಗುತ್ತವೆ. ನಮ್ಮ ಅನಾರೋಗ್ಯಕ್ಕೆ ಗುಣಮಟ್ಟ ಇಲ್ಲದ ಹಾಗೂ ಪೆÇೀಷಕಾಂಶ ಇಲ್ಲದ ಆಹಾರ ಸೇವನೆ ಪ್ರಮುಖ ಕಾರಣವಾಗಿದೆ. ಪ್ರತಿದಿನ ಊಟದಲ್ಲಿ ತರಕಾರಿ ಹಾಗೂ ಮೊಳಕೆ ಕಾಳುಗಳ ಬಳಕೆ ಮಾಡಬೇಕು. ಇದರಿಂದ ರಕ್ತ ಹೀನತೆ ದೂರವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಎಂದು ಸಲಹೆ ನೀಡಿದರು
ಕಮರವಾಡಿ ಉಪ ಕೇಂದ್ರದ ಆರೋಗ್ಯ ಪ್ರಾಥಮಿಕ ಭದ್ರತಾ ಅಧಿಕಾರಿ ಸುಧಾರಾಣಿ ದೇಸಾಯಿ, ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣಕುಮಾರ ಧನವಡಕರ್, ಆರೋಗ್ಯಾಧಿಕಾರಿ ಭವ್ಯ
ಸ್ನೇಹಲತಾ, ಆರೋಗ್ಯ ಅಧಿಕಾರಿ ವಿಶ್ವರಾಧ್ಯ ಹಿರೇಮಠ, ಅಂಗನವಾಡಿ ಸುರಕ್ಷಾ ಅಧಿಕಾರಿ ಎಸ್.ಆರ್ ರಾಣಿ, ಅಂಗನವಾಡಿ ಕಾರ್ಯಕರ್ತೆಯರಾದ ನೀಲಮ್ಮ ಶಿರವಾಳ, ಶಿವಲಿಂಗಮ್ಮ ಗಂಗನೋರ, ಚಂಪಾಬಾಯಿ ಕುಲಕರ್ಣಿ, ಲಕ್ಷ್ಮೀ ಆಲೂರ, ನಿರ್ಮಾಲ ಶಿರವಾಳ, ಸಾವಿತ್ರಿ ದೇವಾಪುರ, ಆಶಾ ಮರೆಮ್ಮ ಕೊಟಗಾರ, ಚನ್ನಮ್ಮ ಆಲೂರ ಸೇರಿದಂತೆ ಗರ್ಭೀಣಿ ಮಹಿಳೆಯರು ಶಿಬಿರದಲ್ಲಿ ಪಾಲ್ಗೋಂಡಿದ್ದರು.