ರಾಷ್ಟ್ರಧ್ವಜದ ಪರಿಕಲ್ಪನೆ ವಿನ್ಯಾಸಕಾರ ಪಿಂಗಲಿ ವೆಂಕಯ್ಯ ಅಪ್ಪಟದೇಶ ಭಕ್ತರು: ಸುರೇಶ್‍ಋಗ್ವೇದಿ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಆ.04- ಭಾರತದ ರಾಷ್ಟ್ರಧ್ವಜದ ಪರಿಕಲ್ಪನೆ ವಿನ್ಯಾಸಕಾರ ಪಿಂಗಲಿ ವೆಂಕಯ್ಯ ಅಪ್ಪಟ ದೇಶ ಭಕ್ತರು, ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಬಹುಭಾμÁವಾದಿ, ಉಪನ್ಯಾಸಕ, ಶಿಕ್ಷಣ ತಜ್ಞ, ಭೂ ವಿಜ್ಞಾನಿ, ಸೈನಿಕರಾಗಿ ಸೇವೆ ಸಲ್ಲಿಸಿದ ವೆಂಕಯ್ಯರವರನ್ನು ಗೌರವಿಸುವುದು ಭಾರತೀಯರ ಕರ್ತವ್ಯವೆಂದು ರಾಷ್ಟ್ರಯುವ ಪ್ರಶಸ್ತಿ ವಿಜೇತ ಸಂಸ್ಕøತಿ ಚಿಂತಕ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಅವರು ಸುಭಾμï ಚಂದ್ರ ಬೋಸ್‍ರವರ ನೆನಪಿನಲ್ಲಿ ನಿರ್ಮಿಸಿರುವ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ತಿಂಗಳಿ ವೆಂಕಯ್ಯ ಭಾವಚಿತ್ರ ಹಾಗು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಮಾತನಾಡುತ್ತಾ ರಾಷ್ಟ್ರಧ್ವಜ ನಿರ್ಮಾಣವು ಪ್ರತಿಯೊಬ್ಬ ನಾಗರಿಕನ ಮತ್ತು ದೇಶದ ಗೌರವ ಸಂಕೇತ. ಭಾರತದಲ್ಲಿ ಪುರಾತನ ಕಾಲದಿಂದಲೂ ತಮ್ಮದೇ ಆದ ಧ್ವಜಗಳನ್ನು ಹೊಂದಿ ರಾಜ ಮಹಾರಾಜರು ಗೌರವಿಸುವ ಮೂಲಕ ಅಖಂಡ ಭಾರತದ ಶ್ರೇಷ್ಠ ಚಿಂತನೆಗಳನ್ನು ಮೂಡಿಸಿದ್ದರು. ನಂತರದ ಕಾಲದಲ್ಲೂ ರಾಷ್ಟ್ರ ಧ್ವಜದ ಪರಿಕಲ್ಪನೆ ನಿರಂತರವಾಗಿ ಪ್ರತಿದೇಶದಲ್ಲೂ ಮೂಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವೆಂಕಯ್ಯನವರು ರೂಪಿಸಿದ ರಾಷ್ಟ್ರಧ್ವಜವನ್ನು 19201 ರಲ್ಲಿ ಗಾಂಧೀಜಿಯವರು ಅನುಮೋದಿಸಿ ಅಂತಿಮ ಪರಿಷ್ಕರಣೆ ಮಾಡಿ 1947 ರಲ್ಲಿ ಅಂಗೀಕರಿಸಲಾಯಿತು.
ಕೇಸರಿತ್ಯಾಗ ಬಲಿದಾನದ ಸಂಕೇತವಾಗಿದ್ದು, ಬಿಳಿ ಬಣ್ಣ ಸತ್ಯ,ಶಾಂತಿ ಹಾಗೂ ಹಸಿರು ಸಮೃದ್ಧಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ.ಅಶೋಕ ಚಕ್ರವು ನ್ಯಾಯಧರ್ಮದ ಸಂಕೇತವಾಗಿ ಪ್ರತಿಯೊಬ್ಬ ಭಾರತೀಯನ ಉತ್ಸಾಹವನ್ನು, ದೇಶಭಕ್ತಿಯನ್ನು, ರಾಷ್ಟ್ರಚಿಂತನೆಯನ್ನು ಮೂಡಿಸುತ್ತದೆ. ರಾಷ್ಟ್ರಧ್ವಜವು ಸ್ವತಂತ್ರದೇಶದ ಸಂಕೇತವಾಗಿದ್ದು, ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜಕ್ಕೆ ಗೌರವಿಸುವ ಮನೋ ಧರ್ಮವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರಧ್ವಜದ ವಿಶೇಷತೆ ಮತ್ತು ಮಹತ್ವದ ಕುರಿತು ಜಾಗೃತಿಯ ಕಾರ್ಯಕ್ರಮಗಳನ್ನು ರೂಪಿಸುವುದು ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಗಸುಂದರ್, ಶ್ರಾವ್ಯಋಗ್ವೇದಿ, ಕುಸುಮ, ಮುರುಗೇಶ್, ರವಿ, ಶಂಕರ, ರಾಜು, ಪ್ರಕಾಶ, ಮಂಜು, ಕೃಷ್ಣಮೂರ್ತಿ ಉಪಸ್ಥಿತರಿದ್ದರು.