ಪಾದಯಾತ್ರೆ ವಿರೋಧಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ
ಸಂಜೆವಾಣಿ ನ್ಯೂಸ್
ಮೈಸೂರು: ಆ.04:- ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ವತಿಯಿಂದ ನಡೆಸುತ್ತಿರುವ ಪಾದಯಾತ್ರೆ ವಿರೋಧಿಸಿ ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಲಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟನೆಗಳ ನೂರಾರು ಕಾರ್ಯಕರ್ತರು ಏಕಲವ್ಯ ವೃತ್ತದಿಂದ ತಮಟೆ ಬಾರಿಸುತ್ತ ಬೃಹತ್ ಮೆರವಣಿಗೆಯ ಮೂಲಕ ಸಾಗಿ ನ್ಯಾಯಾಲಯದ ಮುಂಭಾಗದ ಗಾಂಧಿ ಪತ್ರಿಮೆ ಮಾಲಾರ್ಪಣೆ ಮಾಡಿದರು. ಬಳಿಕ ಎಂ.ಜಿ.ರಸ್ತೆಯ ಮೂಲಕ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಪ್ರತಿಭಟನಾಕಾರರನ್ನು ತಡೆದು ಪರಿಸ್ಥಿತಿ ತಿಳಿಗೊಳಿಸಿದರು.
420 ವಿಜಯೇಂದ್ರ, ಅಹಿಂದ ವಿರೋಧಿ ಜೆಡಿಎಸ್, ಬಿಜೆಪಿಗೆ ದಿಕ್ಕಾರ, ಗೋ ಬ್ಯಾಕ್ ಗೌವರ್ನರ್, ಬಿಜೆಪಿ ಕೈಗೊಂಬೆಯಾಗಿ ವರ್ತಿಸುತ್ತಿರು ರಾಜ್ಯಪಾಲರಿಗೆ ಧಿಕ್ಕಾರ ಎಂಬ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಹುಜನ ನಾಯಕ ಸಿದ್ದರಾಮಯ್ಯ ಅವರನ್ನು ಆಡಳಿತದಿಂದ ಕೆಳಗಿಳಿಸಲು ಬಿಜೆಪಿ-ಜೆಡಿಎಸ್ ಹುನ್ನಾರ ನಡೆಸುತ್ತೇವೆ. ಕಾನೂನು ಬಾಹಿರವಾಗಿ ರಾಜ್ಯಪಾಲರಿಂದ ನೋಟಿಸ್ ಕೊಡಿಸಿ ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹಣಿಯುವ ಉದ್ದೇಶದಿಂದ ಕೋಮುವಾದಿ ಮತ್ತು ಜಾತಿವಾದ ಪಕ್ಷಗಳಾದ ಬಿಜೆಪಿ-ಜೆಡಿಎಸ್ ರಾಜಕೀಯ ಹುನ್ನಾರದ ಪಾದಯಾತ್ರೆ ನಡೆಸುತ್ತಿವೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲವೆಂದು ದಾಖಲೆಗಳು ಹೇಳುತ್ತೇವೆ. ಈ ಬಗ್ಗೆ ಸ್ವತಃ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಆದರೂ ಕೂಡ ಅಹಿಂದ ನಾಯಕರನ್ನು ತೇಜೋವಧೆ ಮಾಡಿ ರಾಜಕೀಯ ಮುಗಿಸಬೇಕು ಪಾದಯಾತ್ರೆ ನಡೆಸುತ್ತಿರುವುದು ಖಂಡನೀಯ. ಕೂಡಲೇ ಪಾದಯಾತ್ರೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಅಹಿಂದ ಸಮುದಾಯಗಳು ಪ್ರತಿಪಕ್ಷಗಳ ವಿರುದ್ಧ ದಂಗೆ ಹೇಳಲಿವೆ ಎಂದು ಎಚ್ಚರಿಕೆ ನೀಡಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಜಾಗ್ರತೆ ಕ್ರಮವಾಗಿ ಪೆÇಲೀಸರು ಬಿಜೆಪಿ ಕಚೇರಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿತ್ತು.
ಅಹಿಂದ ಸಂಘಟನೆಯ ಮುಖಂಡರಾದ ಸುಬ್ರಮಣ್ಯ, ಎನ್.ಆರ್. ನಾಗೇಶ್, ರವಿನಂದನ್, ಶಿವಣ್ಣ, ಯೋಗೇಶ್ ಉಪ್ಪಾರ್, ರಾಜಶೇಖರ್, ಲೋಕೇಶ್ಕುಮಾರ್ ಮಾದಾಪುರ, ಹೆಚ್.ಎಸ್.ಪ್ರಕಾಶ್, ಸಿದ್ದು, ದಸಂಸ ಸಂಚಾಲಕ ದೇವಗಳ್ಳಿ ಸೋಮಶೇಖರ್, ಮಲ್ಲೇಶ್ ಚುಂಚನಹಳ್ಳಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದರು.