ವಿದ್ಯಾರ್ಥಿಗಳು ಸಹನೆ ಏಕಾಗ್ರತೆ ರೂಡಿಸಿಕೊಳ್ಳಿ: ಬಮನಾ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.04: ವಿದ್ಯಾರ್ಥಿಗಳು ಸಹನೆ, ಏಕಾಗ್ರತೆ, ಸಹಕಾರ, ಸಮನ್ವಯತೆಯನ್ನು ರೂಢಿಸಿಕೊಂಡು ಮನಸ್ಸಿನಲ್ಲಿ ಉಂಟಾಗುವ ವೈರುಧ್ಯಗಳ ಮೆಟ್ಟಿ ನಿಲ್ಲದಿದ್ದರೆ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುವದು ಕಷ್ಟಕರವೆಂದು ಉಪನ್ಯಾಸಕ ಬಲ್ಲೇನಹಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಯೋಗ ಗುರು ಎಸ್.ಎಂ.ಅಲ್ಲಮಪ್ರಭು ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಜೀವನ ಮೌಲ್ಯಗಳ ಅವಶ್ಯಕತೆ, ಮತ್ತು ಉಪಯುಕ್ತತೆಯನ್ನು ಕುರಿತ ಮೌಲ್ಯ ಶಿಕ್ಷಣ ತರಭೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಕ್ಷಣವೂ ನಾವು ಅಪ್ಡೇಟ್ ಆಗಬೇಕಿದೆ. ಇಲ್ಲದಿದ್ದರೆ ಉದ್ಯೋಗದ ಮಾರುಕಟ್ಟೆಯಲ್ಲಿ ನಾವು ಪ್ರಸ್ತುತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಓದು ಮತ್ತು ಅಧ್ಯಯನಕ್ಕೆ ಗಮನ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಪೆÇೀನ್ ನಿಂದ ಅಧ್ಯಯನದ ಕೊರತೆ ಹೆಚ್ಚಾಗಿದ್ದು ಶಾಲೆಯಲ್ಲಿ ಸೂಕ್ತ ತಿಳುವಳಿಕೆ ನೀಡಬೇಕಿದೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಮಾಡದೆ ಯೌವ್ವನದ ಪ್ರೀತಿ ಪ್ರೇಮಗಳ ಬಲೆಗೆ ಬೀಳದಂತೆ ಚಿತ್ತ ಚಾಂಚಲ್ಯವನ್ನು ತಡೆದು ಮುನ್ನುಗ್ಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಬಲ್ಲೇನಹಳ್ಳಿ ಮಂಜುನಾಥ್ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಯತ್ನಾಅಕ್ಕ
ಯೋಗ ಗುರು ಎಸ್.ಎಂ.ಅಲ್ಲಮಪ್ರಭು ಸವಿತಕ್ಕ, ಜಯಕ್ಕ, ಶಿಕ್ಷಣ ಸಂಯೋಜಕರಾದ ಶ್ರೀ ವೀರಭದ್ರಯ್ಯ, ಛಾಯಾದೇವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸವಿತಾ ರಮೇಶ್, ತಾಲ್ಲೂಕು ಎಸ್.ಸಿ/ ಎಸ್.ಟಿ ಶಿಕ್ಷಕರ ಸಂಘದ ಅಧ್ಯಕ್ಷ ಹಳಿಯೂರು ಯೋಗೇಶ್, ಶಿಕ್ಷಕರಾದ ಮಂಜುನಾಥ್, ಹರ್ಷವರ್ಧನ್, ಸುಷ್ಮಾ, ವೆಂಕಟೇಶ್, ಕಾವೇರಿ ಟೈಲರ್ ವಾಸು ಸೇರಿದಂತೆ ಹಲವರು ಭಾಗವಹಿಸಿದ್ದರು.