ಕಾಯಕ ಸಮಾಜವನ್ನು ತುಳಿಯಲು ಬಿಜೆಪಿಯಿಂದ ಪಾದಯಾತ್ರೆ: ಪು.ಶ್ರೀನಿವಾಸ ನಾಯ್ಕ
ಸಂಜೆವಾಣಿ ವಾರ್ತೆ
ಚಾಮರಾಜನಗರ ಆ.04-ರಾಜ್ಯದಲ್ಲಿ ಪ್ರವಾಹದಿಂದ ಬಹಳಷ್ಟು ಹಾನಿಯಿಂದ ಸಾವಿರಾರುಜನರು ನಲುಗಿದ್ದುಕೇಂದ್ರದಿಂದ ಪರಿಹಾರಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡದೇಕ್ಷುಲ್ಲಕಕಾರಣ ಮುಂದಿಟ್ಟುಕೊಂಡುಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸುವಲ್ಲಿ ಬಿಜೆಪಿ ಪಾದಯಾತ್ರೆಕೈಗೊಂಡಿರುವುದುಒಂದುರೀತಿಯಲ್ಲಿಕಾಯಕ ಸಮಾಜವನ್ನು ತುಳಿಯಲು ಯತ್ನಿಸಿದೆ ಎಂದು ಅಹಿಂದ ಹಿತರಕ್ಷಣಾ ಹೋರಾಟ ಸಮಿತಿಯ ಸಂಚಾಲಕ ಪು.ಶ್ರೀನಿವಾಸ ನಾಯ್ಕ ಆರೋಪಿಸಿದರು.
ನಗರದಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಹಿಂದ ಹಿತಕ್ಷಣಾ ಸಮಿತಿ ವತಿಯಿಂದ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದಅವರುಕಾಯಕ ಸಮಾಜ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿತುಂಬಾ ಹಿಂದುಳಿದಿದೆ, ಈ ಬಗ್ಗೆ ಬಿಜೆಪಿ ಯಾವುದೇಕ್ರಮ ಕೈಗೊಳ್ಳದೇ ತಾವು ನಡೆಸಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಂಡುಯಾವುದೇತನಿಖೆ ನಡೆಸದೇ ಹಿಂದುಳಿದ ಅಹಿಂದ ನಾಯಕರಾದ ಸಿದ್ದರಾಮಯ್ಯ ಅವರನ್ನುಅಧಿಕಾರದಿಂದ ಕೆಳಗಿಳಿಸಲು ನಡೆಸುವ ಪ್ರಯತ್ನ ಫಲ ನೀಡುವುದಿಲ್ಲ ಎಂದರು,
ರಾಜ್ಯದಲ್ಲಿ ಅಹಿಂದ ಸಮಾಜದವರ ಮತ ಪಡೆದುಅಧಿಕಾರಕ್ಕೆ ಬಂದ ಬಿಜೆಪಿಯಲ್ಲಿ ಬಲಿಷ್ಟ ವರ್ಗದವರು ಮುಖ್ಯಮಂತ್ರಿಆಗಿದ್ದ ವೇಳೆ ಕಾಯಕ ಸಮಾಜಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ, ಆದರೇ ಈಗ ಸಾಮಾಜಿಕಕಾರ್ಯಕರ್ತಟಿ.ಜೆ. ಅಬ್ರಾಹಾಂ ನೀಡಿರುವರಾಜ್ಯಪಾಲರಿಗೆ ನೀಡಿರುವದೂರಿನ ಹಿಂದೆ ಹಲವರಕೈವಾಡಇದೆ ಹೀಗಾಗಿ ಹಿಂದುಳಿದ ವರ್ಗಗಳ ನಾಯಕರನ್ನು ತುಳಿಯುತಿರುವ ಬಿಜೆಪಿ ಬಗ್ಗೆ ಎಚ್ಚರದಿಂದಇರಬೇಕೆಂದು ಸಲಹೆ ನೀಡಿದರು,
ಮುಖಂಡ ನಲ್ಲೂರುರಾಜಶೇಖರ್ ಮಾತನಾಡಿ ಅಹಿಂದ ಸಮಿತಿರಚನೆಆಗುತ್ತಿರುವುದುಉತ್ತಮ ಬೆಳವಣಿಗೆ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಮನು ಸಂಸ್ಕøತಿ ಹೊಂದಿದೆ, ಸಿದ್ದರಾಮಯ್ಯ ಅವರಅಧಿಕಾರದಲ್ಲಿಯಾವುದೇಅಕ್ರಮ ನಡೆದಿಲ್ಲ, ಜಮೀನಿಗೆ ಬದಲಾಗಿ ನಿವೇಶನ ಪಡೆದಿದ್ದಾರೆ, ಆದರೇ ಬಿಜೆಪಿಯವರುತಮ್ಮಅಧಿಕಾರದಅವಧಿಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದುಎಲ್ಲರಿಗೂ ತಿಳಿದಿದೆ, ಈ ಬಗ್ಗೆ ತನಿಖೆ ನಡೆಸಲಿ ಎಂದುತಿಳಿಸಿದರು.
ಮುಖಂಡರಾದ ಬಸವನಪುರರಾಜಶೇಖರ್, ಮಧುವನಹಳ್ಳಿ ನಂಜುಂಡಸ್ವಾಮಿ, ಸಂಘಸೇನಾ, ಸಿ.ಎಂ. ಶಿವಣ್ಣ, ಮುಳ್ಳೂರು ಶಿವಮಲ್ಲು ಇತರರು ಮಾತನಾಡಿದರು. ಸಭೆಯಲ್ಲಿ ಅಹಿಂದ ಮುಖಂಡರಾದಜನ್ನೂರು ಮಹದೇವು, ಕುರುಬರ ಸಂಘದಜಿಲ್ಲಾಧ್ಯಕ್ಷ ನಂಜೇಗೌಡ, ಜಿ.ಪಂ ಮಾಜಿ ಸದಸ್ಯರಮೇಶ್, ಲಿಂಗರಾಜು, ಸೋಮಣ್ನೇಗೌಡ, ಎಂ. ಶಿವಮೂರ್ತಿ, ಕೆಸ್ತೂರು ಮರಪ್ಪ, ಕಮಲ್, ಡಿಎಸ್‍ಎಸ್ ಸಿದ್ದರಾಜು, ಶಂಕರ್, ಸೂತ್ತನಹುಂಡಿ ಸೋಮಣ್ಣ, ಚಿನ್ನಸ್ವಾಮಿ, ಗುರುಸ್ವಾಮಿ, ಬೆಳ್ಳೆಗೌಡ, ಕಾಗಲವಾಡಿ ಶಿವಸ್ವಾಮಿ, ಸುಭಾಷ್ ಮಾಡ್ರಳ್ಳಿ, ಮಾದಾಪುರಕುಮಾರ್ ಸೇರಿದಂತೆ ಹಲವರುಇದ್ದರು.