ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ: ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಹನೂರು ಆ 4 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆಯ ವಿಶೇಷವಾಗಿ ವಿವಿಧ ರೀತಿಯ ಬಣ್ಣ ಬಣ್ಣದ ಹೂವು ಹಣ್ಣು ತರಕಾರಿಗಳಿಂದ ಮಲೆ ಮಾದಪ್ಪನ ಸನ್ನಿಧಿಯನ್ನು ಆಕರ್ಷಕವಾಗಿ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಮಾವಾಸ್ಯೆಯಲ್ಲಿ ವಿಶೇಷವಾಗಿ ಮಲೆ ಮಾದಪ್ಪನ ದರ್ಶನ ಪಡೆದು ಪೂಜೆ ಹರಕೆ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು. ವಿಶೇಷವಾಗಿ ಪೂಜಾ ಕೈಂಕಾರ್ಯಗಳು ನಡೆಯಲಿದೆ. ದೇವಾಲಯದ ಗರ್ಭಗುಡಿಯಲ್ಲಿ ಹಾಗೂ ಸುತ್ತಮುತ್ತಲೂ ವಿವಿಧ ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿದೆ.
ಕಂಬಗಳು ಹಾಗೂ ಮೇಲ್ಭಾಗದಲ್ಲಿ ಹೂಗಳು ಸೇರಿದಂತೆ ಬಗೆಬಗೆಯ ಹಣ್ಣು ತರಕಾರಿಗಳಿಂದ ಆಕರ್ಷಣೀಯವಾಗಿ ಅಲಂಕಾರ ಮಾಡಲಾಗಿದ್ದು. ಭಕ್ತಾದಿಗಳು ಮಲೆ ಮಾದಪ್ಪನ ದರ್ಶನಕ್ಕೆ ಬರುವ ವೇಳೆ ಸನ್ನಿಧಿಯಲ್ಲಿ ಸಿಂಗರಿಸಿ ಆಲಂಕರಿಸಿರುವುದನ್ನು ಕಣ್ತುಂಬಿಕೊಂಡು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಲೆ ಮಾದಪ್ಪನ ಸನ್ನಿಧಿ ಹಾಗೂ ಹೊರಾಂಗಣ ಸುತ್ತಮುತ್ತಲು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ರಾತ್ರಿ ವೇಳೆ ಹೊಳೆಯುವ ವಿದ್ಯುತ್ ದೀಪಾಲಂಕಾರ ತಳಿರು ತೋರಣಗಳಿಂದ ಸಿಂಗರಿಸಲಾಗಿರುವುದು ಭಕ್ತರ ಪಾಲಿಗೆ ಸ್ವರ್ಗದಂತೆ ಭಾಷವಾಗುವಂತಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು. ಪ್ರಾಧಿಕಾರದ ವತಿಯಿಂದ ಭಕ್ತರಿಗೆ ಬೇಕಾದ ಮೂಲಭೂತ ಸೌಕರ್ಯ. ದಾಸೋಹದ ವ್ಯವಸ್ಥೆ ಕಲ್ಪಿಸುವುದು. ಸೇರಿದಂತೆ ಭಕ್ತಾದಿಗಳಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.