ನಿವೃತ್ತ ಬೆಸ್ಕಾಂ ಅಧಿಕಾರಿ ಕೆ.ಎಂ.ವಿ. ಸ್ವಾಮಿಗೆ ಅಭಿನಂದನೆ
ಕೋಲಾರ, ಆ,೪ – ಕೆ.ಎಂ.ವಿ. ಸ್ವಾಮಿಯವರು ಸದಾ ಹಸನ್ಮುಖಿ ಸರಳ ಸಜ್ಜನಿಕೆಯ ನಡೆಯನ್ನು ಹೊಂದಿದ್ದು ಅನೇಕ ಸಮಾಜಪರ ಕೆಲಸಗಳನ್ನು ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು, ನಗರದ ಗೌರಿಪೇಟೆಗೆ ಕಂಬಗಳು ಮತ್ತು ತಂತಿಗಳನ್ನು ಅಳವಡಿಸಲು ಕೆಇಬಿ ಮತ್ತು ನಗರಸಭೆಗೆ ಅರ್ಜಿ ಸಲ್ಲಿಸಿದ್ದು ಅದನ್ನು ಕೇವಲ ಮೂರು ತಿಂಗಳಲ್ಲಿ ಇತ್ಯರ್ಥ ಪಡಿಸಿ, ೧೫ ಲಕ್ಷ ರೂಗಳ ವೆಚ್ಚದಲ್ಲಿ ಕಂಬಗಳು ಮತ್ತು ತಂತಿಗಳನ್ನು ಗೌರಿಪೇಟೆಗೆ ಅಳವಡಿಸಿರುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎನ್.ರವಿಂದ್ರನಾಥ್ ಶ್ಲಾಘಿಸಿದರು.
ಕೆ.ಎಂ.ವಿ. ಸ್ವಾಮಿ ರವರು ನಿವೃತ್ತಿಯಾದ ಸಂದರ್ಭದದಲ್ಲಿ ಅವರ ನಿವಾಸದಲ್ಲಿ ಜಿಲ್ಲಾ ಸಾಂಸ್ಕೃತಿಕ ಸಾಹಿತ್ಯ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು..
ಕೆ.ಎಂ.ವಿ. ಸ್ವಾಮಿಯವರು ೨೦೧೮ ರಿಂದ ೨೦೨೪ರ ವರೆಗೆ ಕೋಲಾರ ಬೆಸ್ಕಾಂ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿ, ಸತತವಾಗಿ ೪೦ ವಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ ಜುಲೈ ೩೧ ರಂದು ನಿವೃತ್ತಿ ಹೊಂದಿರುತ್ತಾರೆ. ಅವರ ಸುದೀರ್ಘ ಸೇವೆಯಲ್ಲಿ ಹಲವು ಮಂದಿ ತಮ್ಮ ಜೀವನವನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆವರೆಲ್ಲರೂ ಅವರನ್ನು ನೆನೆಯಲೇಬೇಕಾಗುತ್ತದೆ. ಅವರ ಕುಟುಂಬದವರೆಲ್ಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವವರೆ ಆಗಿರುತ್ತಾರೆ. ಶ್ರೀಯುತರು ಕೆಪಿಟಿಸಿಎಲ್ ನೌಕರರ ಸಂಘದ ಕಾರ್ಯಾಧ್ಯಕ್ಷರಾಗಿ, ಕೇಂದ್ರ ಸಮಿತಿಯ ಸದಸ್ಯರಾಗಿ, ಸಂಘಟನಾ ಕಾರ್ಯದರ್ಶಿಗಳಾಗಿ, ಕೆಲಸವನ್ನು ಸಹ ನಿರ್ವಹಿಸಿದ್ದಾರೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಟಿ.ಸುಬ್ಬರಾಮಯ್ಯ ಮಾತನಾಡಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸುಮಾರು ೧೦ ರಿಂದ ೧೫ ಶ್ವಾನಗಳಿಗೆ ಆಹಾರ ಮತ್ತು ತಿಂಡಿ ನೀಡಿ ಸಾಕುತ್ತಿರುವುದು ಅವರಿಗೆ ಪ್ರಾಣಿಗಳ ಬಗ್ಗೆ ಇರುವ ಅನುಕಂಪವನ್ನು ತೋರಿಸುತ್ತದೆ. ಕ್ರಿಕೆಟ್ ಆಟ ಅವರಿಗೆ ಹೆಚ್ಚು ಪ್ರೀತಿ ಮತ್ತು ಹವ್ಯಾಸ ಇಂತಹ ಮಹನೀಯರು ನಿವೃತ್ತಿಯಾದರೂ ಪ್ರವೃತ್ತಿಯನ್ನು ಹೊಂದಿ ಸಮಾಜ ಪರ ಕೆಲಸಗಳನ್ನು ಮಾಡಲಿ ಎಂದರು.
ಜಯ ಕರ್ನಾಟಕ ಸಂಘದ ತ್ಯಾಗರಾಜು ಮಾತನಾಡಿ ಕೆ.ಎಂ.ವಿ. ಸ್ವಾಮಿಯವರು ಮೂಲತಃ ಕೋಲಾರದ ಗೌರಿಪೇಟೆಯ ನಿವಾಸಿಗಳಾಗಿದ್ದು ಮುನಿ ವೆಂಕಟಯ್ಯ ಮತ್ತು ಲೇಟ್ ರಾಮಕ್ಕನವರ ಪುತ್ರನಾದ ಇವರು ಬಾಲ್ಯ ,ವಿದ್ಯಾಭ್ಯಾಸ, ಕೋಲಾರ ನಗರದಲ್ಲಿ ಮುಗಿಸಿ ನಂತರದ ದಿನಗಳಲ್ಲಿ ಡಿಪ್ಲೋಮಾ ಪದವೀಧರರಾಗಿ ಗುಲ್ಬರ್ಗ ಜಿಲ್ಲೆಯ ಅಫ್ಜಲ್‌ಪುರ ತಾಲೂಕಿನಲ್ಲಿ ಒಂದು ವಷದ ಅವಧಿಗೆ ಜೂನಿಯರ್ ಇಂಜಿನಿಯರ್ ಆಗಿ ಕೆಲಸವನ್ನು ನಿರ್ವಹಿಸಿದ ನಂತರ, ಮಡಿಕೇರಿ, ಬೇತಮಂಗಲದಲ್ಲಿ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಎರಡು ವರ್ಷಗಳ ಸೇವೆಯನ್ನು ಸಲ್ಲಿಸಿ, ಜಂಗಮಕೋಟೆ ಯಲ್ಲಿ ವಿದ್ಯುತ್ ಪ್ರಸರಣ ನಿಗಮದಲ್ಲಿ ಸೆಕ್ಷನ್ ಆಫೀಸರ್. ನಂತರ ಕೋಲಾರದಲ್ಲಿ ಸಹಾಯಕ ಇಂಜಿನಿಯರ್ ಆಗಿ, ೨೦೦೬ ರಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿ ಕೋಲಾರದಲ್ಲಿ ಸೇವೆ ಸಲ್ಲಿಸಿ, ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಕೆಲಸವನ್ನು ನಿರ್ವಹಿಸಿ ಹುಮ್ನಾಬಾದ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸೇವೆಯನ್ನು ಸಲ್ಲಿಸಿ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ಸ್ವರ್ಣಭೂಮಿ ಪೌಂಡೇಶನ್‌ನ ಬಿ.ಶಿವಕುಮಾರ್,. ಟ್ರೇಡ್ ಯುನಿಯನ್ ಸಂಘದ ಉಪಾಧ್ಯಕ್ಷರಾದ ಶ್ರೀಧರ್, ಗಲ್‌ಪೇಟೆ ಪೋಲಿಸ್ ಠಾಣೆಯ ರಾಜೇಶ್, ಕಠಾರಿಪಾಳ್ಯ ಸ್ವಾಮಿ, ಜಯ ಕರ್ನಾಟಕ ಸಂಚಾಲಕ ಅರಮನಾಥ್‌ಸ್ವಾಮಿ, ಕೆಇಬಿ ಶಿವು ಮತ್ತಿತರರು ಇದ್ದರು.