ಸುಪ್ರೀಂಕೊರ್ಟ್ ಆದೇಶಕ್ಕೆ ಛಲವಾದಿ ಮಹಾಸಭಾ ಸ್ವಾಗತ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೩; ಆರ್ಥಿಕವಾಗಿ,ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮಾಜಕ್ಕೆ ನ್ಯಾಯಕಲ್ಪಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಒಳಮೀಸಲಾತಿಗೆ ಐತಿಹಾಸಿಕ ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಎನ್.ರುದ್ರಮುನಿ ಸಂತಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಸಮಸಮಾಜ‌ ನಿರ್ಮಾಣಕ್ಕಾಗಿ  ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.ಇದರಿಂದ ನಮ್ಮ ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗಕ್ಕೆ ಅನುಕೂಲವಾಗಲಿದೆ.ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಒಳಮೀಸಲಾತಿ ಜಾರಿಗೊಳಿಸಬೇಕು ಎಂದರು.ಇದೀಗ ರಾಜ್ಯಸರ್ಕಾರ ಒಳಮೀಸಲಾತಿ‌ ಜಾರಿ‌ ಮಾಡಲು ಇದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಆದ್ದರಿಂದ ಮುಖ್ಯಮಂತ್ರಿಗಳು ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ‌ ಜಾರಿ‌ ಮಾಡುವ ಭರವಸೆಯಿದೆ ಎಂದರು.ಆರ್ಥಿಕವಾಗಿ ತುಳಿತಕ್ಕೊಳಗಾದ ಸಮಾಜ ನಮ್ಮದುನಮ್ಮಲ್ಲೇ ಒಳ‌ಪಂಗಡಗಳಿವೆ.ಅಂತವರಿಗೆ ಈ ತೀರ್ಪು ಅನ್ವಯಿಸಲಿದೆ.ಸುಪ್ರೀಂಕೋರ್ಟ್ ನ ನ್ಯಾಯಧೀಶರು ಸುಧೀರ್ಘ ೫೬೫ ಪುಟದ ತೀರ್ಪು ನೀಡಿದೆ ಇದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದರು.ಮುಖಂಡ ಜಯಪ್ರಕಾಶ್ ಮಾತನಾಡಿಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ನೀಡಿರುವ ತೀರ್ಪಿಗೆ ನಮ್ಮ ಸಮಾಜ ಸ್ವಾಗತಿಸುತ್ತದೆ. ಅತ್ಯಂತ ಹಿಂದುಳಿದ ತಳದಲ್ಲಿ ತಳ ಸಮುದಾಯವನ್ನು ಗುರುತಿಸಿ ನ್ಯಾಯಬದ್ದ ಸಾಂವಿಧಾನಿಕ ತೀರ್ಪು ನೀಡಲಾಗಿದೆ ಇದು ನಮಗೆಲ್ಲಾ ಸಂತಸ ತಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಶೇಖರಪ್ಪ,ಕೊಟ್ರಬಸಪ್ಪ,ಬಸವರಾಜ್,ನಾಗಭೂಷಣ್,,ರೇವಣಸಿದ್ದಪ್ಪ,ನವೀನ್,ಕೊಂಡಜ್ಜಿ ರಾಘವೇಂದ್ರ, ಅಣ್ಣಪ್ಪ ಉಪಸ್ಥಿತರಿದ್ದರು.