ಕರೋನಾ ಬಳಿಕ ಸರಿಯಾಗ ಬಸ್ಸುಗಳ ಸಂಚಾರವಿಲ್ಲ
ಜೇವರ್ಗಿ:ಆ.೪: ತಾಲೂಕಿನ ಬಿರಾಳ ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಾಲ್ಕೆöÊದು ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸ್ ಗಳು ಬರುತ್ತಿಲ್ಲ. ಸಂಭAದಪಟ್ಟ ಅಧೀಕಾರಿಗಳು ವಾರದೊಳಗೆ ಈ ಸಮಸ್ಯೆಯನ್ನ ಬಗೆಹರಿಸದಿದ್ದರೆ ರಾಜ್ಯ ಹೇದ್ದಾರಿಯನ್ನ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮನವಿ ನೀಡಿದರು.
ಪಟ್ಟಣದ ಬಸ್ಸ್ ಘಟಕದ ವ್ಯವಸ್ಥಾಪಕರಿಗೆ ಬಿರಾಳ ಬಿ ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಮನವಿ ಸಲ್ಲಿಸಿದರು.
ತಾಲೂಕಿನ ಬಿರಾಳ ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಿರಾಳ ಕೆ, ಹೊನ್ನಳ, ರಾಂಪೂರ, ಹೊತಿನಮಡು ಗ್ರಾಮಗಳಿಗೆ ಕರೋನಾ ಸಮಯಕ್ಕಿಂತಲು ಮುಂಚೆ ಬಸ್ಸ್ ಗಳು ಸಮಯಕ್ಕೆ ಸರಿಯಾಗಿ ಬರುತ್ತಿದ್ದವು ಆದರೆ ತದಾದನಂತರ ಬಸ್ಸ್ ಗಳು ಸರಿಯಾಗಿ ಬರುತ್ತಿಲ್ಲ. ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಹಾಗೂ ಸರಕಾರಿ ಅಧೀಕಾರಿಗಳು ತಮ್ಮ ಪ್ರತಿದಿನದ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಸಮಯಕ್ಕೆ ಬಾರದ ಬಸ್ಸ್ ಗಳಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುತ್ತಿದ್ದಾರೆ. ಜೇವರ್ಗಿ ಯಿಂದ ಹೊತಿನಮಡು, ರಾಂಪೂರ ಬಸ್ಸ್ ಗಳು ಸರಿಯಾಗಿ ಸಂಚಾರ ಮಾಡದಿದ್ದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಆದ್ದರಿಂದ ಸಂಭAದಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನ ವಾರದೊಳಗೆ ಸರಿಪಡಿಸದಿದ್ದರೆ ಕೆಲ್ಲುರ ಬಳಿ ರಾಜ್ಯ ಹೆದ್ದಾರಿಯನ್ನ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಅಧೀಕಾರಿಗಳಿಗೆ ಮನವಿ ನೀಡುವುದರ ಮುಖಾಂತರ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರವೀಂದ್ರಗೌಡ ಮಾಲಿಪಾಟೀಲ್, ಬಸವರಾಜ ಸಾಹು ಕೂಡಲಗಿ, ಗೌಸ್ ಪಟೇಲ್ ಪೊಲೀಸ್ ಪಾಟೀಲ್, ಮಕ್ತುಮ್ ಪಾಷಾ ಜಮಾದರ್, ಮಾನಪ್ಪ ದೊಡ್ಡಮನಿ, ಫೀರೋಜ್ ಮ್ಯಾಗೇರಿ, ರಾಜು ಹಳಿಮನಿ, ನಿಂಗಪ್ಪ ನಂದಿಹಳ್ಳಿ, ಬಸಲಿಂಗಪ್ಪ ನಾಸೀ, ಸುರ್ಯಕಾಂತ ಬಿರಾಳ ಕೆ, ಪೀರಪ್ಪ ಯಾಳವಾರ, ಮೌನೇಶ ನಂದಿಹಳ್ಳಿ, ಶರಣು ನೆಲೋಗಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.