ವ್ಯಾಸ ಋಷಿ ಭಾರತದ ಅದಮ್ಯ ಚೇತನ: ರಾಜಶ್ರೀ ಜುಗತಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೪:ಪ್ರಾರ್ಥನೆ, ಕರ್ಮ, ವೇದಗಳು, ತಪಸ್ಸು, ಯೋಗದ ಅಭ್ಯಾಸ, ಎಲ್ಲದರಲ್ಲಿಯೂ ಅಪಾರ ಜ್ಞಾನಿಯಾದ ವ್ಯಾಸ ಮಹರ್ಷಿಗಳು ‘ಮಹಾಭಾರತ’ ಎನ್ನುವ ಬಹುದೊಡ್ಡ ಮಹಾಕಾವ್ಯವನ್ನು ನೀಡಿ ಜ್ಞಾನದ ಸುಧೆಯನ್ನು ಉಣಬಡಿಸಿದ್ದಾರೆ. ಮಹಾನ್ ಋಷಿ ವ್ಯಾಸರು ಸೃಷ್ಟಿಯ ಎಲ್ಲಾ ರಹಸ್ಯವನ್ನು ತಿಳಿದಿದ್ದಾರೆ. ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಅವರು ಅಪಾರ ಜ್ಞಾನವನ್ನು ಹೊಂದಿದ್ದಾರೆ. ವ್ಯಾಸ ಋಷಿ ಭಾರತ ದೇಶದ ಅದಮ್ಯ ಚೇತನ ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಅವರು ಹೇಳಿದರು.
ಶನಿವಾರ ಚೇತನಾ ಶಿಕ್ಷಣ ಸಂಸ್ಥೆಯ ಚೇತನಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲದ ವತಿಯಿಂದ ಹಮ್ಮಿಕೊಂಡ ವ್ಯಾಸ ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಸಾಹಿತಿ ಪ್ರೊ, ಎ. ಎಚ್. ಕೊಳಮಲಿ ಮಾತನಾಡಿ, ವೇದ, ಪುರಾಣ, ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳು, ಭಾರತ ದೇಶದ ಪರಂಪರೆಯನ್ನು ಇಡೀ ಜಗತ್ತಿಗೆ ತಿಳಿಸಿ ಕೊಟ್ಟ ಮಹಾನ್ ಮೇಧಾವಿ, ಶ್ರೇಷ್ಠ ಸಾಧು, ಸಂತರಿಗೆ ಜನ್ಮ ನೀಡಿದ ಹೆಮ್ಮೆಯ ದೇಶ ನಮ್ಮದು. ನಮ್ಮ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾದುದ್ದು ಶರಣರು, ಸಂತರು, ದಾಸರು, ಮಹರ್ಷಿಗಳು ನಮಗೆಲ್ಲ ಜ್ಞಾನದ ಬುತ್ತಿಯನ್ನು ಕಟ್ಟಿ ಹೋಗಿದ್ದಾರೆ. ಆ ಜ್ಞಾನದ ಬುತ್ತಿಯನ್ನು ಬಿಚ್ಚಿ ಉಣ್ಣುವ ಕೆಲಸವನ್ನು ಯುವಕರು ಮಾಡಬೇಕಾಗಿದೆ ಎಂದರು.
ಭಾರತೀಯ ಶಿಕ್ಷಣ ಮಂಡಲ ವಿಜಯಪುರ ಘಟಕದ ಪ್ರಾಂತ ಸಹ ಕಾರ್ಯದರ್ಶಿ ಸಿದ್ಧು ಮದರಖಂಡಿ ಮಾತನಾಡಿ, ಇಡೀ ಜಗತ್ತೆ ಪೂಜಿಸುವಂತಹ ಪುಣ್ಯದ ರಾಷ್ಟç ನಮ್ಮದು. ವ್ಯಾಸ ಮಹರ್ಷಿಗಳು ತಮ್ಮ ಜ್ಞಾನದಿಂದ ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರ್ಪಡಿಸಿದ್ದಾರೆ ಎಂದÀÄ ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಉಪಾಧ್ಯಕ್ಷೆ ಶೀಲಾ ಬಿರಾದಾರ ಮಾತನಾಡಿ, ಗುರು-ಶಿಷ್ಯರ ಪರಂಪರೆಯನ್ನು ಮಹರ್ಷಿಗಳು ಜಗತ್ತಿಗೆ ಪರಿಚಯಿಸಿದ್ದಾರೆ. ಇಂದಿನ ಯುವ ಪೀಳಿಗೆಯ ಜನಾಂಗ ಒಳ್ಳೆಯ ಸಂಸ್ಕಾರವನ್ನು ಹೊಂದಬೇಕಾಗಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಬಿ.ಎಸ್. ಬಾಪಗೊಂಡ ಮಾತನಾಡಿ, ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ತಾಯಿ ಹಾಗೂ ತಾಯಿನಾಡಿಗಾಗಿ ಹೋರಾಡುವ ಯುವಕರ ಅವಶ್ಯಕತೆ ಇದೆ ಎಂದು ಹೇಳಿದರು.
ಉಪಾಧ್ಯಕ್ಷ ರೋಹಿತ್ ಜುಗತಿ, ನಿರ್ದೇಶಕ ಡಾ, ನಾಗರಾಜ ಹೇರಲಗಿ, ಸಂಯೋಜಕರಾದ ಸಾಗರ ಕುಲಕರ್ಣಿ, ಸಿ. ಎಸ್. ವಾಲಿ, ವಿದ್ಯಾರ್ಥಿ ಸಮೂಹ ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.