ನಾಳೆಯಿಂದ ಪುರಾಣ ಪ್ರಾರಂಭ
ತಾಳಿಕೋಟೆ:ಆ.೪: ತಂಗಡಗಿ ಗ್ರಾಮದ ಶ್ರೀ ಗುರುಸಂಗಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ನವಲಗುಂದ ಅಜಾತ ಶ್ರೀ ನಾಗಲಿಂಗ ಶಿವಯೋಗಿಗಳ ಮಹಾಪುರಾಣವು ಪ್ರಾರಂಭಗೊಳ್ಳಲಿದೆ.
ಈ ಪುರಾಣ ಪ್ರವಚನವು ಪ್ರತಿದಿನ ಸಂಜೆ ೭ ರಿಂದ ೯ ಗಂಟೆಯವರೆಗೆ ನಡೆಯಲಿದ್ದು ಪುರಾಣ ಪ್ರವಚನವನ್ನು ತಾಳಿಕೋಟೆ ತಾಲೂಕಿನ ಪಡೇಕನೂರ ಗ್ರಾಮದ ಶ್ರೀ.ಷ.ಬ್ರ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ನಡೆಸಿಕೊಡಲಿದ್ದು ಸಂಗೀತ ಸೇವೆಯನ್ನು ದೂಳಖೇದ ಸುರೇಶ ಪತ್ತಾರ, ಶಿರ್ಶಾಡದ ರಮೇಶ ಹೂಗಾರ ಅವರು ನಡೆಸಿಕೊಡಲಿದ್ದಾರೆಂದು ಪ್ರಕಟನೆ ತಿಳಿಸಿದೆ.