ನಾಳೆಯಿಂದ ಬಳಗಾನೂರಲ್ಲಿಶಿವಶರಣೆ ಮಂಜುಳಾತಾಯಿ ಅವರ ೧೧ನೇ ಅನುಷ್ಠಾನ ಪ್ರಾರಂಭ
ತಾಳಿಕೋಟೆ:ಆ.೪: ದೇಶದಲ್ಲಿ ಸಮೃದ್ದಿಯಾಗಿ ಇಲ್ಲದ ಸ್ಥಳಗಳಲ್ಲಿ ಮಳೆ ಬೆಳೆ ಚೆನ್ನಾಗಿ ಬರಲಿ ರೈತರು ಹಾಗೂ ದೇಶದ ಇತಿಹಾಸ ಕಾಪಾಡಲು ಮುಂದಾಗಿರುವ ಸೈನಿಕರೂ ಸಹ ಯಾವುದೇ ಆತಂಕವಿಲ್ಲದೇ ದೇಶದ ರಕ್ಷಣೆಯಾಗಲಿ ಹಾಗೂ ಇತ್ತಿಚಗೆ ಸುರಿದ ಮಳೆಯಿಂದ ದೇಶ ವಿದೇಶಗಳಲ್ಲಿ ಆತಂಕಕ್ಕೆ ಸಿಲುಕಿದ ಜನತೆ ಎಂದಿನAತೆ ನೆಮ್ಮದಿಯಿಂದ ಜೀವನ ನಡೆಸುವಂತಹ ಕಾರ್ಯ ಪ್ರಾರಂಭವಾಗಲಿ ಎಂಬ ಉದ್ದೇಶಹೊತ್ತು ಭಕ್ತೋದ್ದಾರ ಜನೋದ್ದಾರಕ್ಕಾಗಿಯೂ ಮೌನಾನುಷ್ಠಾನವನ್ನು ತಿಂಗಳ ರ‍್ಯಂತ ನಡೆಸಲು ತಾಳಿಕೋಟೆ ಸಮಿಪದ ಬಳಗಾನೂರ ಗ್ರಾಮದ ಪೂಜ್ಯ ಶಿವಶರಣೆ ಮಂಜುಳಾತಾಯಿ ಅವರು ಸಜ್ಜಾಗಿದ್ದಾರೆ.
ಇದೇ ದಿ.೫ ಸೋಮವಾರರಿಂದ ಮೌನನಾನುಷ್ಠಾನವನ್ನು ಪ್ರಾರಂಬಿಸಲು ಮುಂದಾಗಿರುವ ಬಳಗಾನೂರ ಗ್ರಾಮದ ಶಿವಶರಣೆ ಮಂಜುಳಾತಾಯಿ ಅವರು ಸಪ್ಟಂಬರ್ ೪ ರವರೆಗೆ ಮೌನಾನುಷ್ಠಾನವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.
ಪೂಜ್ಯ ಶಿವಶರಣೆ ಮಂಜುಳಾತಾಯಿ ಅವರು ಕೈಕೊಳ್ಳಲಾಗುತ್ತಿರುವ ಈ ಮೌನಾನುಷ್ಠಾನವು ೧೧ನೇ ಸಲದ ಮೌನಾನುಷ್ಠಾನ ಇದಾಗಿದ್ದು ಈ ಅನುಷ್ಠಾನ ಬಳಗಾನೂರ ಗ್ರಾಮದಲ್ಲಿರುವ ಅಲ್ಲಮಪ್ರಭುದೇವರ ಹೆಸರಿನ ಸ್ವ ಗ್ರಹದಲ್ಲಿ ನಡೆಯಲಿದೆ ಕೇವಲ ಜಫ ತಫ ಪಾರಾಯಣದೊಂದಿಗೆ ನಡೆಯಲಿರುವ ಈ ಅನುಷ್ಠಾನ ಸಮಯದಲ್ಲಿ ಕೇವಲ ಹಣ್ಣು ಹಂಪಲು ಹೊರತುಪಡಿಸಿ ಊಟೋಪಚಾರದಂತಹ ಸೇವನೆಯನ್ನು ದೂರಿಕರಿಸಿರುವದಾಗಿ ಅವರು ತಿಳಿಸಿದ್ದಾರೆ.
ಶಿವಶರಣೆ ಮಂಜುಳಾತಾಯಿ ಅವರು ಈ ಹಿಂದೆ ಬಳಗಾನೂರ ಗ್ರಾಮದಲ್ಲಿಯೇ ೮ ಸಲ ಮೌನಾನುಷ್ಠಾನವನ್ನು ಭಕ್ತೋದ್ದಾರ ದೇಶೋದ್ದಾರಕ್ಕಾಗಿ ಕೈಕೊಂಡಿದ್ದರು. ಒಮ್ಮೆ ೨೧ ದಿನ, ಮತ್ತೆ ೪೧ ದಿನ, ಹಾಗೂ ೪೮ ದಿನ, ಇದು ಅಲ್ಲದೇ ತಿಂಗಳ ೧ ರಂತೆ ೪ ಸಲ ಅನುಷ್ಠಾನ ಕೈಕೊಂಡಿದ್ದ ಇವರು ಈ ಹಿಂದೆಯೂ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ೩ ತಿಂಗಳು, ಹೋದ ವರ್ಷ ಕೂಡಲಸಂಗಮದಲ್ಲಿಯೂ ೧ ತಿಂಗಳ ರ‍್ಯಂತ ಮೌನಾನುಷ್ಠಾನ ಕೈಕೊಂಡಿದ್ದರು. ಬಳಗಾನೂರ ಗ್ರಾಮದಲ್ಲಿಯ ಈ ಅನುಷ್ಠಾನ ೯ನೇ ಸಲದ್ದಾಗಿದೆ.
ಮೌನಾನುಷ್ಠಾನ ಕೈಕೊಳ್ಳಲು ನಿರ್ಧರಿಸಿರುವ ಪೂಜ್ಯ ಶಿವಶರಣೆ ಮಂಜುಳಾತಾಯಿ ಅವರ ಅನುಷ್ಠಾನ ಯಶಸ್ವಿ ಕಂಡು ಅವರ ಬೇಕು ಬೇಡಿಕೆಗಳು ಇಡೇರಲಿ ಎಂಬ ಆಸೆಯು ಬಳಗಾನೂರ ಗ್ರಾಮದ ಹಾಗೂ ತಾಳಿಕೋಟೆಯ ಭಕ್ತಸಮೂಹದ್ದಾಗಿದೆ. ತಿಂಗಳ ರ‍್ಯಂತ ನಡೆಯಲಿರುವ ಈ ಅನುಷ್ಠಾನ ಸಮಯದಲ್ಲಿ ಭಕ್ತರ ದರ್ಶನಕ್ಕಾಗಿ ಪ್ರತಿ ದಿನ ಮದ್ಯಾಹ್ನ ೧ ಗಂಟೆಯಿAದ ೨ ಗಂಟೆಯವರೆಗೆ ಕೇವಲ ೧ ಗಂಟೆಕಾಲ ಅವಕಾಶ ಕಲ್ಪಿಸಲು ನಿರ್ಧರಿಸಿರುವದಾಗಿ ಅನುಷ್ಠಾನ ಮೂರ್ತಿ ಪೂಜ್ಯ ಶಿವಶರಣೆ ಮಂಜುಳಾತಾಯಿ ಅವರು ತಿಳಿಸಿದ್ದಾರೆ.