ನಾಳೆಯಿಂದ ಗುಂಡಕನಾಳ ಶ್ರೀಗಳಿಂದ ಪೂಜಾ ಅನುಷ್ಠಾನ
ತಾಳಿಕೋಟೆ:ಆ.೪: ತಾಲೂಕಿನ ಗುಂಡಕನಾಳ ಗ್ರಾಮದ ಕಾಳೇ ಬೆಳಗುಂದಿ ಕಟ್ಟಿಮನಿ ಕರಡಕಲ್ ಬಿಲ್ಲಮರಾಜನ ಗುರುಗಳ ವಂಶಜರಾದ ಸದ್ಧರ್ಮ ಶಿಖಾಮಣಿ ವಿದ್ವಾನ್ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಿರ ಚರ ಪಟ್ಟಾಧ್ಯಕ್ಷರು ಮೂಲ ಸ್ಥಾನ ಬಿಲ್ಲಮಾದ್ರಿ ಸಂಸ್ಥಾನ ಬ್ರಹನ್ಮಠ ಗುಂಡಕನಾಳ ಶ್ರೀಗಳಿಂದ ಶ್ರಾವಣಮಾಸದ ನಿಮಿತ್ಯ ದಿ. ೫ ರಿಂದ ಜಪ ತಪದ ಜೊತೆಗೆ ಮಹಾ ಪೂಜಾ ಅನುಷ್ಠಾನವನ್ನು ಕೈಗೊಳ್ಳಲಿದ್ದಾರೆಂದು ಶ್ರೀಮಠದ ಮೂಲಗಳು ತಿಳಿಸಿವೆ.
ಕಳೆದ ವರ್ಷ ತೆಲಂಗಾಣ ರಾಜ್ಯದ ಕೋಲ್ಲಿಪಾಕಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಉದ್ಭವಿಸಿದ ಕ್ಷೇತ್ರದಲ್ಲಿ ಶ್ರಾವಣ ಮಾಸ ಒಂದು ತಿಂಗಳ ಪರ್ಯಂತರ ಮೌನಾನುಷ್ಠಾನ ಮಾಡಿದ್ದ ಶ್ರೀಗಳು ಈ ವರ್ಷವೂ ಸುಕ್ಷೇತ್ರ ಗುಂಡಕನಾಳ ಶ್ರೀಗಳಾದ ಕಾಳೇ ಬೆಳಗುಂದಿ ಕಟ್ಟಿಮನಿ ಕರಡಕಲ್ ಬಿಲ್ಲಮರಾಜನ ಗುರುಗಳ ವಂಶಜರಾದ ಸದ್ಧರ್ಮ ಶಿಖಾಮಣಿ ವಿದ್ವಾನ್ ಮೂಲ ಸ್ಥಾನ ಬಿಲ್ಲಮಾದ್ರಿ ಸಂಸ್ಥಾನ ಗುಂಡಕನಾಳದ ಬ್ರಹನ್ಮಠದಲ್ಲಿ ಜಪ ತಪ ಮತ್ತು ಮಹಾ ಪೂಜಾ ಅನುಷ್ಠಾನವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.
ಲೋಕಕಲ್ಯಾಣಾರ್ಥವಾಗಿ ಹಾಗೂ ಭಕ್ತರ ಹಿತಕೋಸ್ಕರ ಮತ್ತು ಮಳೆ ಬೆಳೆ ಚೆನ್ನಾಗಿ ಬಂದು ಸಮೃಂದ ರಾಷ್ಟç ನಿರ್ಮಾಣವಾಗಲಿ ಎಂಬ ಸಂಕಲ್ಪದೊAದಿಗೆ ದಿ.೫ ರಿಂದ ಸಪ್ಟಂಬರ್ ೪ ವರೆಗೆ ಈ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಪ್ರತಿ ದಿನ ಮಹಾ ಪೂಜಾ ಕಾರ್ಯಕ್ರಮದ ನಂತರ ಭಕ್ತಾಧಿಗಳಿಗೆ ದರ್ಶನ ಆಶಿರ್ವಾದಕ್ಕೆ ಅವಕಾಶವನ್ನು ಕಲ್ಪಿಸಿದ್ದು ಅದರ ಜೊತೆಗೆ ಆಮಂತ್ರಣ ನೀಡಿದ ಭಕ್ತರ ಹಾಗೂ ವಿವಿಧ ಗ್ರಾಮಗಳಿಗೆ ಬೆಟ್ಟಿ ನೀಡಿ ದರ್ಶನ ನೀಡಲಿದ್ದಾರೆಂದು ಶ್ರೀಮಠವು ಪ್ರಕಟನೆ ತಿಳಿಸಿದೆ.