ಮಾವುತರು ಈ ನಾಡಿಸಂಪತ್ತಿನ ಭಾಗ: ಹರೀಶ್ ಗೌಡ
ಸಂಜೆವಾಣಿ ನ್ಯೂಸ್
ಮೈಸೂರು,:ಸೆ.30:– ದಸರಾ ಗಜಪಡೆ ಹಾಗೂ ಮಾವುತರು ಈ ನಾಡಿನ ಸಂಪತ್ತಿನ ಭಾಗವಾಗಿದ್ದಾರೆಂದು ಶಾಸಕ ಹರೀಶ್ ಗೌಡ ಹೇಳಿದರು.
ಮೈಸೂರು ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಮಾವುತರು ಹಾಗೂ ಕವಾಡಿಗಳು ಹಾಗೂ ಅವರ ಪರಿವಾರಕ್ಕೆ ಸಾಂಪ್ರದಾಯಿಕದಂತೆ ಭಾನುವಾರ ಅರಮನೆ ಆವರಣದಲ್ಲಿ ಉಪಹಾರ ವಿತರಿಸಿ ಅವರು ಮಾತನಾಡಿದರು. ಕಾವಾಡಿ ಹಾಗೂ ಮಾವುತರ ಕುಟುಂಬ ಆರೋಗ್ಯದ ಕಡೆ ಗಮನ ನೀಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ನಿಮ್ಮ ಜೊತೆ ಸದಾ ನಾವು ಇರುತ್ತೇವೆ ಎಂದರು.
ಅರಣ್ಯ ಸಂಪತ್ತಿಗೆ ನಾಡಿನ ಸಂಪತ್ತಾಗಿದೆ. ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ, ನಿಮಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಡಿಎಫ್ ಒ ಪ್ರಭು ಗೌಡ, ಆರ್.ಎಫ್.ಸಂತೋಷ, ಸ್ವಾತಿ ಎಂ ಗೌಡ ,ನಗರ ಪಾಲಿಕೆ ಮಾಜಿ ಸದಸ್ಯರಾದ ಗೋಪಿ, ಡೆಲ್ಲಿ ರವಿ, ಪ್ರಮೋದ್, ರವಿಚಂದ್ರ, ಸಂತೋಷ್, ಪ್ರಶಾಂತ್, ಸಂದೀಪ್, ವಿನೋದ್ ಅರಸ್, ನಿತಿನ್ ,ಶಿವಕುಮಾರ್, ಪ್ರಜ್ವಲ್, ಗಗನ್, ಜೈ ಶೀಲ್, ಲೋಕೇಶ್, ಗುರುರಾಜ್ ಶೆಟ್ಟಿ, ಮಂಜುನಾಥ್, ನವೀನ್, ಧನುಷ್ , ಶುಭ ಮುಂತಾದವರು ಉಪಸ್ಥಿತರಿದ್ದರು.