ಸಂಸ್ಕೃತಿ ಉಳಿಯಬೇಕು:ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.30 : ಸಂಸ್ಕೃತಿ ಪರಂಪರೆ ಧಾರ್ಮಿಕ ಕಾರ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಉಳಿದಿದೆ ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲೂಕಿನ ಕಸಬಾ ಹೋಬಳಿಯ ಕುಪ್ಪಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಕೃಪಾಪೆÇೀಷಿತ ನಾಟಕ ಮಂಡಳಿಯ ವತಿಯಿಂದ ಪಿತೃಪಕ್ಷ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಕ್ಷಿಪ್ತ ಮಹಾಭಾರತ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೃಶ್ಯ ಮಾಧ್ಯಮಗಳಿಗಿಂತ ಮೊದಲು ಜನರು ಮನರಂಜನೆಗಾಗಿ ನಾಟಕ ನೋಡುವ ಹವ್ಯಾಸ ಇಟ್ಟುಕೊಂಡಿದ್ದರು ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿ.ವಿ ಪ್ರಭಾವ ಹೆಚ್ಚಾಗಿ ಈಗ ನಾಟಕ ನೋಡುವವರು ಸಂಖ್ಯೆ ಕಡಿಮೆಯಾಗಿದೆ. ನಾಟಕಗಳನ್ನು ನೋಡುವುದರಿಂದ ರಂಗಭೂಮಿ ಕಲೆ ಉಳಿಯುತ್ತದೆ,ಹಬ್ಬ ಹರಿದಿನಗಳಲ್ಲಿ ಮಾತ್ರ ನಾಟಕಗಳನ್ನು ಪ್ರದರ್ಶಿಸಿದರೆ ಸಾಲದು. ಆಗಾಗ್ಗೆ ಗ್ರಾಮಗಳಲ್ಲಿ ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಅಭಿನಯ ಚತುರತೆ ಇನ್ನಷ್ಟು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ಗ್ರಾಮದ ಹಿರಿಯ ಮುಖಂಡರಾದ ನಾಗೇಶ್ ಕುಮಾರ್,ಕೇಶವ್ ಮೂರ್ತಿ, ಅಣ್ಣಪ್ಪ, ಬಸಣ್ಣ, ಸತ್ಯರಾವ್ ಮೂರ್ತಿ,ಕೆ.ಎನ್ ಕೃಷ್ಣೆಗೌಡ,ಚಕ್ರಪಾಣಿ, ಕೃಷ್ಣನಾಯಕ ,ಗಾರೆ ವಿಜಿ,ಯೋಗೇಶ್,ಉಮೇಶ್,ಗ್ರಾ. ಪಂ.ಸದಸ್ಯ ಸಾಧುಗೊನಹಳ್ಳಿ ಕುಮಾರ್,ಕರೋಟಿ ಕುಮಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.