ಗುರುಕುಲವೆಂದರೆ ವೈಚಾರಿಕ ಸಂಸ್ಕಾರ ಆಚಾರ ವಿಚಾರ ಹೇಳಿಕೊಡುವ ಮಠದ ಶಾಲೆ
ಸಂಜೆವಾಣಿ ವಾರ್ತೆ
ಹನೂರು.ಸೆ.30:- ಗುರುಕುಲವೆಂದರೆ ವೈಚಾರಿಕ ಸಂಸ್ಕಾರ ಆಚಾರ ವಿಚಾರವನ್ನು ಹೇಳಿಕೊಡುವ ನಮ್ಮ ಮಠದ ಶಾಲೆಗಳು ಇಲ್ಲಿನ ಶಾಲೆಯ ಮಕ್ಕಳಾದ ನೀವುಗಳು ಸಾಧನೆ ಮಾಡಿ ನೀವು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಸಾಲೂರು ಬೃಹನ್ಮಠಾಧ್ಯಕ್ಷರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿದರು.
ತಾಲ್ಲೂಕಿನ ಪೆÇನ್ನಾಚಿ ಗ್ರಾಮದಲ್ಲಿರುವ ಶ್ರೀ ಸಾಲೂರುಸ್ವಾಮಿ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡಿದ್ದ ಜ್ಞಾನಧಾರ ‘ ಟ್ರಸ್ಟ್ (ನೋ) ಭೂಮಿ ಫೌಂಡೇಶನ್ (ರಿ) ಹಾಗೂ ರೋಟರಿ ಬೆಂಗಳೂರು ಹೈಗ್ರೆಂಡ್ಸ್ ರವರಿಂದ ಸೋಲಾರ್ ವಿದ್ಯುತ್ ಉದ್ಘಾಟನೆ ಹಾಗೂ ಶಾಲಾ ಮಕ್ಕಕಳಿಗೆ ಭಗವದ್ಗೀತೆ ಪುಸ್ತಕವನ್ನು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭೌಗೋಳಿಕ ಪ್ರದೇಶದಲ್ಲಿ ಕಟ್ಟಕಡೆಯ ಗ್ರಾಮ ಪೆÇೀನ್ನಾಚಿ ಗ್ರಾಮ ಎಲ್ಲಾ ಮಕ್ಕಳು ಒಳ್ಳೆಯ ರೀತಿಯ ಶಿಕ್ಷಣ ವ್ಯವಸ್ಥೆಯಿಂದ ಸಾಗಲಿ, ಶಿಕ್ಷಣದಿಂದ ಎಲ್ಲವನ್ನೂ ಪಡೆಯಬಹುದು ಎಂಬ ಸದುದ್ದೇಶದಿಂದ ನಮ್ಮ ಪೂಜ್ಯ ಗುರುಗಳು ಈ ಗ್ರಾಮದಲ್ಲಿ ಶಾಲೆಯನ್ನು ಸ್ಥಾಪಿಸಿದರು.
ಶಾಲೆಗಳನ್ನು ಸ್ಥಾಪಿಸಬಹುದು ಆದರೆ ನಿರ್ವಹಣೆ ಮಾಡಲು ಮೂಲಭೂತ ಸೌಕರ್ಯಗಳನ್ನು ನಿರ್ವಹಿಸಲು ಗ್ರಾಮಸ್ಥರ ಹಾಗೂ ಮಣಿಗಾರ್ ಗೌಡ್ರು ಮನೆತನಗಳಿಂದ ನಿರ್ವಹಣೆ ಮಾಡಿಕೊಂಡು ಬಂದಿದೆ 36 ಶಿಕ್ಷಣದ ಸಂಸ್ಥೆಗಳು ಇವೆ, ಅದರಲ್ಲಿ ಅಗ್ರಮಾನ್ಯ ಸ್ಥಾನದಲ್ಲಿ ಪೆÇೀನ್ನಾಚಿ ಗ್ರಾಮ ಶಾಲೆ ಇದೆ.
ಇಲ್ಲಿನ ಶಿಕ್ಷಣ ವ್ಯವಸ್ಥೆ ಸಿಬ್ಬಂದಿಗಳ ಪರಿಶ್ರಮದಿಂದಲ್ಲೇ ಹಾಗೂ ಜ್ಞಾನಧಾರ ‘ ಟ್ರಸ್ಟ್ (ನೋ) ಭೂಮಿ ಫೌಂಡೇಶನ್ (ರಿ) ಹಾಗೂ ರೋಟರಿ ಬೆಂಗಳೂರು ಹೈಗ್ರೆಂಡ್ಸ್ ಇವರ ಕಾರ್ಯವು ಶ್ಲಾಘನೀಯ ಇಡೀ ಗ್ರಾಮದಲ್ಲಿ ಶಿಕ್ಷಣದಿಂದ ಕೇಂದ್ರ ಸಾಹಿತ್ಯ ಪಡೆದ ಸಾಹಿತಿಗಳ ಇದ್ದಾರೆ ಈ ಪೆÇನ್ನಚಿ ಗ್ರಾಮದಲ್ಲಿ ಏನೋ ಶಕ್ತಿ ಇದೆ.
ನಗರ ಪ್ರದೇಶಗಳಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದರೆ ಕಲ್ಲು ಮಣ್ಣುಗಳ ಪರಿಚಯವಿಲ್ಲದೆ ಸೂರ್ಯ ಹುಟ್ಟುವುದು ಮುಳುಗುವುದು ಸಮಯ ಕೇಳಿದರೆ ಗೂಗಲ್ ನಲ್ಲಿ ಹುಡುಕುತ್ತಾರೆ ಆದರೆ ನಮ್ಮ ಈ ಭಾಗದ ಮಕ್ಕಳನ್ನು ಕೇಳಿದರೆ ಅವರೇ ಹೇಳುತ್ತಾರೆ. ಜ್ಞಾನಕ್ಕಾಗಿ, ಬೆಳವಣಿಗೆಗಾಗಿ , ಬೆಳಿಗ್ಗೆಯಿಂದ ಸಂಜೆವರೆಗೂ ಓದಬೇಕು ಬರೆಯಬೇಕು ಕಲಿಬೇಕು ಗೊತ್ತಿಲ್ಲ ಎಂದರೆ ಶಿಕ್ಷಕರನ್ನು ಕೇಳಬೇಕು.
ಒಂದು ಸ್ಥಳೀಯ ಭಾಷೆಯ ಜೊತೆಯಲ್ಲಿ ಅಂತಾರಾಷ್ಟ್ರೀಯ ಭಾಷೆಯನ್ನು ಕಲಿಯಬೇಕು ಕಲಿತರೆ ಯಾವುದೇ ವಿಷಯದಲ್ಲಿ ಓದಲು ಕಷ್ಟವಾಗುವುದಿಲ್ಲ ಪ್ರತಿನಿತ್ಯ ಬರೆಯಬೇಕು ಜ್ಞಾನ ಬರುತ್ತದೆ ದಿನಪತ್ರಿಕೆಗಳನ್ನು ಪ್ರತಿನಿತ್ಯ ಓದಬೇಕು ಪ್ರಚಲಿತ ವಿದ್ಯಮಾನ ಕ್ರೀಡೆ ಅಂತರಾಷ್ಟ್ರೀಯ ವಿಷಯದ ಬಗ್ಗೆ ಸುದ್ದಿಗಳನ್ನು ಓದಬೇಕು.
ಸ್ಪರ್ದಾತ್ಮಕ ಜಗತ್ತು ಇನ್ನಿತರೆ ಒಳ್ಳೆ ಪುಸ್ತಕಗಳನ್ನು ಅಭ್ಯಾಸ ಮಾಡಬೇಕು ಹಾಗೂ ತಂದೆ ತಾಯಿಗಳಿಗೆ ಗುರುಗಳಿಗೆ ನಮಸ್ಕಾರ ಮಾಡಬೇಕು ಇದರಿಂದ ಸಂಸ್ಕಾರ ಕಲಿಯಬಹುದು ಹಾಗಾದರೆ ಮಾತ್ರ ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಈ ವೇಳೆಯಲ್ಲಿ ಅಧ್ಯಕ್ಷತೆ ವಹಿಸಿದ ಶ್ರೀ ವೈ, ವಿ ರಾಧಾಕೃಷ್ಣನ್ ರವರು ಮಾತನಾಡಿ ಪ್ರಪಂಚದಲ್ಲಿ ಒಂದು ಸುಂದರವಾದ ಪರಿಸರದಲ್ಲಿರುವ ಗ್ರಾಮ ಈ ಪೆÇಣ್ಣಚಿ ಗ್ರಾಮ ಕರ್ನಾಟಕದ ಭೂಪಟದಲ್ಲಿ 30 ಜಿಲ್ಲೆಗಳಲ್ಲಿ ಬಹಳ ಶ್ರೇಷ್ಠವಾದ ಐತಿಹಾಸಿಕ ಪ್ರಾಪಂಚಿಕ ಜಗತ್ತಿನಾದಂತಹ ಅವಿಭಾಜ್ಯ ಜಿಲ್ಲೆ ಮೈಸೂರು ಚಾಮರಾಜನಗರ ಈ ಈ ಜಿಲ್ಲೆಯಲ್ಲಿ ಹುಟ್ಟಿರೋರು ಸೌಭಾಗ್ಯ.
ಸಾಲೂರು ಮಠ ಸ್ವಾಮೀಜಿಗಳ ಆಶೀರ್ವಾದದಿಂದ ಪೆÇನ್ನಾಚಿ ಗ್ರಾಮದಲ್ಲಿ ಶಿಕ್ಷಣ ಪಡೆಯುತ್ತಿರುವ ನೀವೇ ಪುಣ್ಯವಂತರು ಕಳೆದ ಒಂದು ವರ್ಷದಲ್ಲಿ ನಾವು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸಹಕಾರ ನೀಡಿದರು.
ಹಾಗೆಯೇ ಈ ವರ್ಷವೂ ಭೇಟಿ ನೀಡಿದಾಗ ಶಾಲೆಗೆ ಸೋಲಾರ್ ಅಡವಳಿಕೆ ಮಾಡಿಕೊಡಿ ಎಂದು ಕೇಳಿ ದರು ಪ್ರಪಂಚದಾದ್ಯಂತ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ರೋಟರಿ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಕಟ್ಟ ಕಡೆಯ ಗ್ರಾಮಕ್ಕು ಸೇವೆಯು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಈಗಿನ ವ್ಯವಸ್ಥೆಯಲ್ಲಿ ಸಮಾಜದಿಂದ ಪಡೆದುಕೊಂಡು ಮತ್ತೆ ಸಮಾಜಕ್ಕೆ ನೀಡಬೇಕು ಎಂದು ತಿಳಿಸಿದರು.
ಸೋಲಾರ್ ವಿದ್ಯುತ್ ಉದ್ಘಾಟನೆ ಹಾಗೂ ಉಚಿತ ಭಗವದ್ಗೀತೆ ವಿತರಣೆ ಕಾರ್ಯಕ್ರಮದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಹಾಗೂ ಸ್ವ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಭಗವದ್ಗೀತೆ ಜೋತೆಯಲ್ಲಿ ಡಿಜಿಟಲ್ ಸ್ಲಾಟ್ ಯನ್ನು ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ಕಾಡಂಚಿನ ಒಂದು ಗ್ರಾಮಕ್ಕೆ ಸೋಲಾರ್ ವಿದ್ಯುತ್ತನ್ನು ಸ್ಥಾಪಿಸುತ್ತೇವೆ.
ರಾಮಪುರ ಗ್ರಾಮದಲ್ಲಿ ಒಂದು ಗೋ ಶಾಲೆಯನ್ನು ತೆರೆಯಲಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಾಥ್ ಕಾರ್ಯದರ್ಶಿ ಭೂಮಿ ಫೌಂಡೇಶನ್ ಮುತ್ಕೂರು, ವೆಂಕಟೇಶ್ ಉಪಾಧ್ಯಕ್ಷರು ಜ್ಞಾನದಾರ ಟ್ರಸ್ಟ್, ರಮೇಶ್ ಗೌಡ್ರು ರೋಟರಿ ಬೆಂಗಳೂರು, ಎಂಡಿ ದೇವೇಗೌಡರು ಖಜಾಂಚಿ ಜ್ಞಾನದಾರ ಟ್ರಸ್ಟ್, ಧನಂಜಯ್ ರೋಟರಿ ಬೆಂಗಳೂರು ಹೈಗೌಂಡ್ಸ್ , ವೆಂಕಟೇಶ್ ಬಿ ಸಿ ಭೂಮಿ ಫೌಂಡೇಶನ್ ಟ್ರಸ್ಟ್, ವೆಂಕಟೇಶ್ ಸದಸ್ಯರು ಭೂಮಿ ಫೌಂಡೇಶನ್, ನಾರಾಯಣಸ್ವಾಮಿ, ಆಲಂಬಡಿ ಸ್ವಾಮಿಜಿ ವೀರಪ್ಪ ದೇವರು, ಮಹೇಶ್ ಕುಮಾರ್ ಜಿ ಕಾರ್ಯಕ್ರಮ ನಿರ್ವಹಣೆ ಹಾಗೂ ನಿರೂಪಣೆ ವ್ಯವಸ್ಥಾಪಕರು ಜ್ಞಾನದಾರ ಟ್ರಸ್ಟ್, ಪ್ರಶಾಂತ್, ಶಿವಣ್ಣ ಗೌಡ್ರು, ಪಿಕೆ ಬಸವರಾಜು ಮಣಿಗರ್, ಶಿವರುದ್ರ ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.