ಶಿಸ್ತುಬದ್ದ ಕವಾಯತಿಗೆ ಆಗಸ್ಟ್ 11 ರಿಂದ 13ರವೆಗೆ ಪೂರ್ವಾಭ್ಯಾಸಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೪; ಸ್ವಾತ್ಯಂತ್ರ ದಿನಾಚರಣೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಗಸ್ಟ್ 11 ರಿಂದ 13 ವರೆಗೆ ಪಥ ಸಂಚಲನದ ಕವಾಯತು ಪೂರ್ವಾಭ್ಯಾಸ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದರು.ನಗರದ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಸ್ವಾತ್ಯಂತ್ರೋತ್ಸ ವದ ಪರೇಡ್ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪೂರ್ವಾಭ್ಯಾಸದಲ್ಲಿ ಪೊಲೀಸ್, ಗೃಹ ರಕ್ಷಕ, ಅರಣ್ಯ ಹಾಗೂ ಅಬಕಾರಿ ಇಲಾಖೆಗಳ ಜೊತೆ ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ನಗರದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು. ಆಗಸ್ಟ್ 11 ರಿಂದ 13 ವರೆಗೆ ಪ್ರತಿದಿನ ಬೆಳಿಗ್ಗೆ 6:30ಕ್ಕೆ ಕವಾಯತು ಅಭ್ಯಾಸ ಪ್ರಾರಂಭವಾಗುವುದು. ದೈಹಿಕ ಶಿಕ್ಷಕರು ತಮ್ಮ ಶಾಲೆಯ ಮಕ್ಕಳನ್ನು ಜಾಗರೂಕತೆಯಿಂದ ಪೂರ್ವಾಭ್ಯಾಸಕ್ಕೆ ಕರೆ ತರಬೇಕು. ಸ್ವಾತಂತ್ರ ದಿನಾಚರಣೆಯಂದು ಉತ್ತಮ ಸಮವಸ್ತçಗಳ ಜೊತೆ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.