ಹೊಳಲ್ಕೆರೆಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಗಾರ
ಸಂಜೆವಾಣಿ ವಾರ್ತೆ
ಹೊಳಲ್ಕೆರೆ.ಆ.೪; ಭಾರತ ಸೇವಾದಳ ಮತ್ತು  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊಳಲ್ಕೆರೆ ಇವರ ಸಹಯೋಗದಲ್ಲಿ  ನಗರದ ಬಿ. ಆರ್.ಸಿ.  ಸಭಾಂಗಣದಲ್ಲಿ  ಸೇವಾದಳದ ಶತಮಾನೋತ್ಸವದ ಅಂಗವಾಗಿ ತಾಲೂಕು ಮಟ್ಟದ ಶಿಕ್ಷಕರ  ಪುನಶ್ಚೇತನ ಕಾರ್ಯಗಾರವನ್ನು  ಹಮ್ಮಿಕೊಳ್ಳಲಾಗಿತ್ತು.  ಕಾರ್ಯಗಾರವನ್ನು ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ವಿಜಯ್ ಕುಮಾರ್ ರವರು  ಉದ್ಘಾಟಿಸಿದರು.  ನಂತರ ಮಾತನಾಡಿದ ಅವರು   ಸೇವಾದಳವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಸ್ಥೆಯಾಗಿದ್ದು ಈ ಸಂಘಟನೆ ಸ್ಥಾಪನೆಯಾಗಿ ನೂರು ವರ್ಷಗಳು ತುಂಬಿವೆ ಎಂದರು.   ಶಾಲಾ ಶಿಕ್ಷಕರು ಮಕ್ಕಳಿಗೆ ಸೇವಾದಳ  ವಿಷಯವನ್ನು ಬೋಧನೆ ಮಾಡುವ ಮೂಲಕ  ಮಕ್ಕಳಿಗೆ ಸೇವಾದಳ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು. ತಾಲ್ಲೂಕಿನ ಶಿಕ್ಷಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜ ಮಾಹಿತಿ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.ವಲಯ ಸಂಘಟಕರಾದ ಎಂ. ಅಣ್ಣಯ್ಯ ನವರು ಪ್ರಾಸ್ತವಿಕವಾಗಿ ಶಾಖೆಯ ವಾರ್ಷಿಕ ಚಟುವಟಿಕೆ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಸೇವಾದಳ ಅಧ್ಯಕ್ಷರಾದ ಕೆ. ಸಿ. ರಮೇಶ್ ವಹಿಸಿದ್ದರು.ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷೆಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಧನಂಜಯರವರು ಕಾರ್ಯಕ್ರಮ ನಿರೂಪಿಸಿದರು. ದೇವರಾಜ್ ಸ್ವಾಗತಿಸಿದರು. ಚಂದ್ರಕಲಾ ವಂದಿಸಿದರು.