ಆ. 5 ರಂದು”ನಮ್ಮ ಸಾರಿಗೆ ನಿಮ್ಮ ಶಾಲೆಗೆ” ಫೋನ್ ಇನ್ ಕಾರ್ಯಕ್ರಮ
ಕಲಬುರಗಿ:ಆ.3: ಪ್ರಸಕ್ತ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕವಾಗಿ ಸಾರಿಗೆ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕೆ.ಕೆ.ಆರ್.ಟಿ.ಸಿ. ನಿಗಮದ ಕಲಬುರಗಿ ವಿಭಾಗ-1 ರಿಂದ “ನಮ್ಮ ಸಾರಿಗೆ ನಿಮ್ಮ ಶಾಲೆಗೆ” ಫೋನ್ ಇನ್ ಕಾರ್ಯಕ್ರಮ ಆಗಸ್ಟ್ 5 ರಂದು ಮಧ್ಯಾಹ್ನ 3.30 ರಿಂದ ಸಾಯಂಕಾಲ 5.30 ಗಂಟೆ ವರೆಗೆ ಆಯೋಜಿಸಲಾಗಿದೆ.
ವಿಭಾಗಿಯ ಕಚೇರಿಯಲ್ಲಿ ನಡೆಯಲಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ, ಸೇಡಂ, ಚಿತ್ತಾಪೂರ, ಕಾಳಗಿ, ಶಹಾಬಾದ ಹಾಗೂ ಕಮಲಾಪೂರ ತಾಲ್ಲೂಕಿನ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಂದ ಸಾರಿಗೆ ಸಮಸ್ಯೆಗಳ ಅಹವಾಲು ಆಲಿಸಲಾಗುತ್ತದೆ.
ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ದುರವಾಣಿ ಸಂ. 7760992100, 7760992102 ಹಾಗೂ 6366423879 ಗಳಿಗೆ ಕರೆ ಮಾಡಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.