ಶಿಕ್ಷಕ ವಿಜಯಕುಮಾರ ಸ್ವಾಮಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆ
ಭಾಲ್ಕಿ: ಆ.3:ಇಪ್ಪತ್ತಾರು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾಲೂಕಿನ ನೇಳಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಜಯಕುಮಾರ ಸ್ವಾಮಿ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡಲಾಯಿತು.
ಗುರುವಾರ ಅಲ್ಲಿಯ ಶಾಲಾ ಅವರಣದಲ್ಲಿ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೋಳ್ಕರ್ ಮಾತನಾಡಿ, ವಿಜಯಕುಮಾರ ಸ್ವಾಮಿ ಅವರ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ತಿಳಿಸಿದರು.
ವಿಜಯಕುಮಾರ ಸ್ವಾಮಿ ಅವರು 01 ಆಗಸ್ಟ್ 1964ರಂದು ಭಾಲ್ಕಿ ತಾಲೂಕಿನ ಕಣಜಿ U್ಫ್ರಮದಲ್ಲಿ ರಾಚೋಟೆಪ್ಪ ಹಾಗೂ ಶಿವಮ್ಮ ದಂಪತಿಗಳ ಉದರದಲ್ಲಿ ಜನಿಸಿದರು. P್ಪಣಜಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿ ಬೀದರ್‍ನ ಡೈಟ್ ಕಾಲೇಜಿನಲ್ಲಿ ಟಿ.ಸಿ.ಹೆಚ್, ಹಳ್ಳಿಖೇಡ್‍ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದರು. ಬಡತನ ಕಿತ್ತು ತಿನ್ನುತ್ತಿದ್ದ ಹಿನ್ನೆಲೆ ಉನ್ನತ ಶಿಕ್ಷಣ ಮಾಡಿರಲಿಲ್ಲ. 1990ರಿಂದ 99ರ ವರೆಗೆ ಒಂಬತ್ತು ವರ್ಷಗಳ ಕಾಲ U್ಫ್ರಮದಲ್ಲಿಯೇ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಚಿತರ 1999ರಲ್ಲಿ ಬೀದರ್ ತಾಲೂಕಿನ ಸಂಗೊಳಗಿಯಲ್ಲಿ ಸರ್ಕರಿ ಶಾಲಾ ಶಿಕ್ಷಕರ ಹುದ್ದೆಗೆ ನಿಯುಕ್ತರಾದರು. ನಚಿತರ ರುದನೂರ, ತದನಚಿತರ ನೇಳಗಿಯಲ್ಲಿ ತಮ್ಮ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಅನುಪಮ ಸೇವೆಗೆ ಅನೇಕ ಪ್ರಶಸಸ್ತಿಗಳು ವಲಿದೆ ಬಂದಿವೆ. ಅವುಗಳಲ್ಲಿ ಪ್ರಮುಖವಾಗಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿರುವರು. ಅನೇಕ ಕವನ ಸಂಕಲನಗಳನ್ನು ಹೊರತಂದ ಕೀರ್ತಿ ವಿಜಯಕುಮಾರ ಸ್ವಾಮಿ ಅವರಿಗೆ ಸಲ್ಲುತ್ತದೆ. ಇತ್ತಿಚೀಗೆ ನಿವೃತ್ತರಾದ ಡಿ.ರಾಜಕುಮಾರ ಹಾಗೂ ವಿಜಯಕುಮಾರ ಇಬ್ಬರು ಜೋಡೆತ್ತುಗಳಂತೆ ಸೇವೆ ಸಲ್ಲಿಸಿ ನೇಳಗಿ ಶಾಲೆಯ ಅಭಿವೃದ್ಧಿಪಡಿಸಿರುವುದು ಪ್ರಶಂಸನಿಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ್ ಮಾತನಾಡಿ, ಸ್ವಾಮಿ ಅವರು ಮಕ್ಕಳಲ್ಲಿ ಮಕ್ಕಳಾಗಿ ಬೆರೆತು ಸ್ವಾಮಿಯವರು ಪಾಠ ಮಾಡುತ್ತಿದ್ದರು. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ನೇಳಗಿಯಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿ ಎಲ್ಲರ ಹೃದಯ ಗೆದ್ದಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಶ್ಲಾಘನೀಯ ಎಂದರು.
ಇದೇ ವೇಳೆ ವಿಜಯಕುಮಾರ ಸ್ವಾಮಿ ದಂಪತಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಾಜಪ್ಪ ಪಾಟೀಲ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀಬಾಯಿ ಸತಗೊಂಡ, ಎಸ್‍ಡಿಎಂಸಿ ಅಧ್ಯಕ್ಷ ಸಂಜೀವಕುಮಾರ ಹಿರಣ್ಯ, ಸಮೂಹ ಸಂಪನ್ಮೂಲ ವ್ಯಕ್ತಿ ಸೋಮನಾಥ ವರ್ಧಾ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀರಂಗರಾವ್, ತಾಲೂಕಾ ಸಿಆರ್‍ಪಿ ಅಧ್ಯಕ್ಷ ಶರಣಪ್ಪ ಕಲ್ಲಪ್ಪನೋರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನಿರಂಜನ ಪಾತ್ರೆ, ತಾಲೂಕು ಕಾರ್ಯದರ್ಶಿ ಅಶೋಕ ಕುಂಬಾರ್, ನಿ. ಮುಖ್ಯ ಗುರು ಡಿ.ರಾಜಕುಮಾರ ಸೇರಿದಂತೆ ಕಣಜಿ ಕ್ಲಸ್ಟರ್ ಮಟ್ಟದ ಎಲ್ಲಾ ಮುಖ್ಯಗುರುಗಳು, ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕ ವೃಂದ ಹಾಗು ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜಯಕುಮಾರ ಸ್ವಾಮಿಯವರು ತಮ್ಮ ನಿವೃತ್ತಿ ಪ್ರಯುಕ್ತ ಶಾಲಾ ಮಕ್ಕಳಿಗೆ ಬೆಲ್ಟ್, ಟೈ ಮತ್ತು ಗುರುತಿನ ಚೀಟಿ ವಿತರಿಸಿ ಇತರರಿಗೆ ಮಾದರಿಯಾದರು.