ಬಗರ್ ಹುಕುಂ ಜಮೀನಿನಲ್ಲಿ ಸ್ಮಶಾನ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ,ಆ.3- ತಾಲೂಕಿನ ಇಟಗಾ (ಕೆ) ಗ್ರಾಮದಲ್ಲಿ ಬರುವ ತಾಂಡಾದ ರೈತರು ಸುಮಾರು 70 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿರುವ ಬಗರ್ ಹೂಕುಂ ಜಮೀನಿನಲ್ಲಿ ಸ್ಮಶಾನ ಭೂಮಿ ಮಾಡಿರುವುದನ್ನು ಖಂಡಿಸಿ ಹಾಗೂ ಇದನ್ನು ಇಲ್ಲಿಂದ ಸ್ಥಳಾಂತರಿಸಲು ಒತ್ತಾಯಿಸಿ ಅಖಿಲ ಭಾರತ ರೈತಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ನೆತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳಲಾಯಿತು.
ಈಗಾಗಲೇ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿರುವ ರೈತರು, ಸರ್ಕಾರಕ್ಕೂ ಅರ್ಜಿ ಹಾಕಿರುವ ಬಗರ್ ಹೂಕುಮ್ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಹೇಶ ಎಸ್.ಬಿ, ವಿಶ್ವನಾಥ ಸಿಂಗೆ, ಶಿವರಾಮ ರಾಠೋಡ, ಪಾಂಡು ರಾಠೋಡ ಸೇರಿದಂತೆ ರೈತ ಕಾರ್ಮಿಕರು ಭಾಗವಹಿಸಿದ್ದರು.