ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವಧನ ಪರಿಷ್ಕರಣೆ ಪರಿಶೀಲನೆಯಲ್ಲಿದೆ: ಸಚಿವ ರಹೀಮ ಖಾನ
ಕಲಬುರಗಿ,ಆ.3- ರಾಜ್ಯದ ನಗರ ಸ್ಥಳೀಯ ಸಂಸ್ಥಗಳ ಸರ್ವ ಸದಸ್ಯರ ಮತ್ತು ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಮೇಯರ್, ಉಪಮೇಯ್ ಅವರಿಗೆ ನೀಡಲಾಗುತ್ತಿರುವ ಗೌರವಧನದ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಪೌರಾಡಳಿತ ಹಾಗೂ ಹಚ್ ಸಚಿವರಾದ ರಹೀಮ ಖಾನ್ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ ಸದಸ್ಯರಾದ ಬಿ.ಜಿ.ಪಾಟೀಲ ಅವರು, ಜು.27ರಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಗೌರವಧನವನ್ನು ಪರಿಷ್ಕರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಕಳೆದ ದಿನಾಂಕ ಮೇ-2, 2023ರಂದು ಮತ್ತು ಜನವರಿ 23, 2024ರಂದು ಆರ್ಥಿಕ ಇಲಾಖೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿರುತ್ತದೆ ಹೀಗಾಗಿ ಪರಷ್ಕರಣೆ ಮಾಡುವ ಪ್ರಸ್ತಾವನೆ ಸರ್ಕಾರ ಪರಿಶೀಲನ ಮಾಡಲಿದೆ ಎಂದು ತಿಳಿಸಿರುವ ಸಚಿವರು, ಕಲಬುರಗಿ ಮತ್ತು ಯಾದಗಿರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಬಿಡುಗಡೆ ಮಾಡಲಾದ ಗೌರವಧನದ ವಿವರಣೆ ಅನುಭಂದ 1ರಲ್ಲಿ ಲಿಖೀತ ವಿರಣೆಯನ್ನು ಬಿ.ಜಿ.ಪಾಟೀಲರಿಗೆ ನೀಡಿದ್ದಾರೆ.