ಪ್ಲಾಸ್ಟಿಕ್ ಬಳಕೆಯ ಕಡಿವಾಣಕ್ಕ್ಕೆ ಆಗ್ರಹಿಸಿ ಮೇಯರ್‍ಗೆ ಮನವಿ
ಕಲಬುರಗಿ,ಆ.3- ಪರಿಸರಕ್ಕೆ ಮಾರಕವಾಗಿರುವ ಕಳಪೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು ಮಹಾನಗರದ ಬಹುತೇಕ ಅಂಗಡಿ, ಹೊಟೆಲ್‍ಗಳು ಮತ್ತು ವ್ಯಾಪಾರಿ ಮಳಿಗೆಗಳಲ್ಲಿ ಅಕ್ರಮವಾಗಿ ಬಳಕೆ ಮಾಡಲಾಗುತ್ತಿದೆ ಇವುಗಳ ಮೆಲೆ ಕಡಿವಾಣ ಹಾಕುವಂತೆ ನೂತನ ಮೇಯರ್ ಯಲ್ಲಪ್ಪ ನಾಯ್ಕೊಡಿ ಅವರಿಗೆ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಅವರನ್ನು ಸೇನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಕಸದ ರಾಶಿಗಳಲ್ಲಿ ಪ್ಲಾಸ್ಟಿಕಗಳ ಪಾಲು ಹೆಚ್ಚಿರುತ್ತದೆ, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಹೀಗಾಗಿ ಮಹಾನಗರದಲ್ಲಿ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಷೇಧ ಏರುವಂತೆ ಬೇಡಿಕೆಯ ಮನವಿ ಪತ್ರವನ್ನು ಮೇಯರ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಮಾ ಪೂಜಾರಿ, ಹುಸೇನ, ಅನಿಲ ತಳವಾರ, ಪಪ್ಪು ಕುಮಸಿ, ಮಲ್ಲು ಆಲಗೂಡ, ಮಾರುತಿ ಪವಾರ, ಪ್ರವೀಣ ಭರಣಿ, ಶಿವು ಮಡಕಿ, ವಿಲಾಸ, ರವಿ ಗುಲ್ಲಾಬಾವಡಿ ಸೇರಿದಂತೆ ಹಲವರಿದ್ದರು.