ಶವ ಪತ್ತೆಗಾಗಿ ಮುಂದುವರಿದ ಕಾರ್ಯಾಚರಣೆ
ಅಫಜಲಪುರ:ಆ.3: ಬಟ್ಟೆ ತೊಳೆಯಲು ಭೀಮಾ ನದಿಗೆ ಸ್ನೇಹಿತರು ಹೋದ ಸಂದರ್ಭದಲ್ಲಿ ಸ್ನೇಹಿತನನ್ನು ಉಳಿಸಲು ಹೋಗಿ ನದಿಯಲ್ಲಿ ಮುಳುಗಿ ವ್ಯಕ್ತಿ ಮೃತಪಟ್ಟ ಘಟನೆ ಅಫಜಪುರದ ತಾಲೂಕಿನ ಗಾಣಗಾಪುರದಲ್ಲಿ ಶುಕ್ರವಾರ ನಡೆದಿದೆ.
ಶಶಿಕುಮಾರ ಡಾಂಗೆ(42) ತನ್ನ ಸ್ನೇಹಿತನನ್ನು ಉಳಿಸಲು ಅಂತ ಭೀಮಾ ನದಿಗೆ ಹಾರಿದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ಥಳೀಯರು ಶರಣು ಅಂಜುಟಗಿ ಎಂಬಾತನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಆತನನ್ನು ಕಾಪಾಡಲು ನದಿಗೆ ಇಳಿದಿದ್ದ ಶಶಿಕಾಂತ್ ದುರಾದೃಷ್ಟವಶಾತ್ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಘಟನೆ ಹಿನ್ನೆಲೆ ದೇವಲ ಗಾಣಗಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಿಗಿನ ಜಾವ ಈ ಘಟನೆ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವ ಪತ್ತೆಗಾಗಿ ಸಾಯಂಕಾಲದವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಿದರೂ ಶವ ಮಾತ್ರ ಪತ್ತೆ ಆಗಿಲ್ಲ. ಹೀಗಾಗಿ ಶವ ಪತ್ತೆಗಾಗಿ ಇಂದು ಶನಿವಾರವೂ ಕೂಡ ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಸಿ.ಪಿ.ಐ ಚೆನ್ನಯ್ಯ ಹಿರೇಮಠ, ಪಿಎಸ್‍ಐ ರಾಹುಲ್ ಪವಾಡೆ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ.