ಡಾ.ಎಸ್.ಎಸ್.ಗುಬ್ಬಿ ಅಭಿನಂದನಾ ಗ್ರಂಥ: ನಾಳೆ ಸಭೆ
ಕಲಬುರಗಿ,ಆ.3-ಖ್ಯಾತ ಎಲಬು ಮತ್ತು ಮೂಳೆ ರೋಗ ತಜ್ಞರಾದ ಡಾ.ಎಸ್.ಎಸ್.ಗುಬ್ಬಿ ಅವರ ಅಭಿನಂದನಾ ಗ್ರಂಥ ಹೊರತಬೇಕೆಂಬುದು ಅವರ ಅಭಿಮಾನಿಗಳ, ಹಿತೈಷಿಗಳ ಮತ್ತು ಸ್ನೇಹಿತರ ಬಹು ದಿನಗಳ ಅಭಿಲಾಷೆಯಾಗಿದ್ದು, ಈ ಸಂಬಂಧ ಚರ್ಚೆ ನಡೆಸಲು ಆ.4 ರಂದು ಸಾಯಂಕಾಲ 5 ಗಂಟೆಗೆ ನಗರದ ಅನ್ನಪೂರ್ಣ ಕ್ರಾಸ್‍ನಲ್ಲಿರುವ ಕಲಾ ಮಂಡಳದಲ್ಲಿ ಸಭೆ ಕರೆಯಲಾಗಿದೆ ಎಂದು ಡಾ.ಎಸ್.ಎಸ್.ಗುಬ್ಬಿಯವರ ಅಭಿಮಾನಿ ಬಳಗದ ಎಸ್.ಎಸ್.ಹಿರೇಮಠ, ಬಿ.ಎಚ್.ನಿರಗುಡಿ, ಗುರುಬಸಪ್ಪ ಎಂ.ಪಾಟೀಲ, ಡಾ.ಸಂಗಮೇಶ ಎಸ್.ಹಿರೇಮಠ, ಪ.ಮನುಸಾಗರ ತಿಳಿಸಿದ್ದಾರೆ.
ಡಾ.ಎಸ್.ಎಸ್.ಗುಬ್ಬಿ ಅವರು ಈ ಭಾಗದ ಚಿರಪರಿಚಿತ ವೈದ್ಯರು. ಖ್ಯಾತ ಎಲಬು ಮತ್ತು ಮೂಳೆ ರೋಗ ತಜ್ಞರು. ಡಾ.ಗುಬ್ಬಿ ಅವರು ವೈದ್ಯಕೀಯ ಸೇವೆಯ ಜೊತೆಗೆ ಸಾಮಾಜಿಕ, ಸಾಹಿತ್ಯ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಅಮೂಲ್ಯವಾದ ಸೇವೆ ಸಲ್ಲಿಸಿ ಸಮಾಜಮುಖಿಯಾಗಿ ಬದುಕುತ್ತಿದ್ದಾರೆ. ಅಲ್ಲದೆ ಹಲವಾರು ಕೃತಿಗಳನ್ನು ಬರೆದು ಸಮಾಜಕ್ಕೆ ಧಾರೆ ಎರೆದಿದ್ದಾರೆ. ಡಾ.ಗುಬ್ಬಿ ಅವರ ಅಭಿನಂದನಾ ಗ್ರಂಥ ಹೊರತರುವ ಕುರಿತು ಕರೆದಿರುವ ಅಂದಿನ ಸಭೆಗೆ ಡಾ.ಗುಬ್ಬಿ ಅವರ ಅಭಿಮಾನಿಗಳು, ಹಿತೈಷಿಗಳು ಮತ್ತು ಸ್ನೇಹಿತರು ಭಾಗವಹಿಸಿ ತಮ್ಮ ಸಲಹೆ, ಸೂಚನೆ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.