ಶಾಂತಪ್ಪ ಬಿಲ್ಲಾಡಗೆ ಆತ್ಮೀಯ ಸನ್ಮಾನ, ಬೀಳ್ಕೊಡುಗೆ
ಕಲಬುರಗಿ,ಆ.3-ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಿರಾಳ (ಬಿ) ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 4 ವರ್ಷ ಹಾಗೂ ಗಂವ್ಹಾರ ಹಾಗೂ ಗಂವನಳ್ಳಿ ಹಾಗೂ ಆಂದೋಲಾ ಗ್ರಾಮದಲ್ಲಿ ಒಟ್ಟು 34 ವರ್ಷ ಸೇವೆಸಲ್ಲಿಸಿ ಮುಖ್ಯಗುರುಗಳಾಗಿ ನಿವೃತ್ತಿ ಹೊಂದಿದ ಶಾಂತಪ್ಪ ಬಿಲ್ಲಾಡ ಅವರಿಗೆ ಬುಧವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಗಂವಾರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ 2001ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2002ರಲ್ಲಿ ವಿಜ್ಞಾನ ಮಿತ್ರ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಗಂವ್ಹಾರ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮಿಸಿದ್ದಾರೆ. ಇದೇ ಶಾಲೆಯಲ್ಲಿ 13 ವರ್ಷ ಸೇವೆಸಲ್ಲಿಸಿದ್ದಾರೆ.
ಆಂದೋಲಾ ಸ. ಉರ್ದು ಹಿ.ಪ್ರಾ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ, ಪ್ರಭಾರಿ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಾರೆ. ಒಂದು ಕೋಣೆ ಇದ್ದದ್ದು ಎಸ್‍ಎಸ್‍ಎ ಅನುದಾನದಲ್ಲಿ 4 ಕೋಣೆಗಳನ್ನು ನಿರ್ಮಿಸಿದ್ದಾರೆ. ಎಸ್‍ಎಲ್‍ಡಿಪಿ ಕಾರ್ಯಕ್ರಮ ಮಾಡಿ ಮಕ್ಕಳ ದಾಖಲಾತಿ ಹೆಚ್ಚುವಂತೆ ಮಾಡಿದ್ದಾರೆ. ಇಲ್ಲಿ 14 ವರ್ಷ ಸೇವೆಸಲ್ಲಿಸಿದ್ದಾರೆ.
Éಗಂವನಳ್ಳಿ ಶಾಲೆಯಲ್ಲಿ ಸೇವೆ ಸಲ್ಲಿಸುವಾಗ ಜಿ.ಪಂ.ವತಿಯಿಂದ ಮಕ್ಕಳಿಗೆ ಕುಡಿಯುವ ನೀರು ಒದಗಿಸಿದ್ದಾರೆ. ಅನೇಕ ಸಸಿಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಿದ್ದಾರೆ. ಬಿರಾಳ (ಬಿ) ಗ್ರಾಮದ ಮಾ. ಪ್ರಾ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಎಸ್‍ಡಿಎಂಸಿ ಅಧ್ಯಕ್ಷ ಪೀರಸಾಬ, ಸಿಆರ್‍ಪಿ ಅಬ್ದುಲ್ ರಜಾಕ್, ಶರಣು ಸಾಹುಕಾರ, ಹಿ.ಪ್ರಾ ಶಾ ಮು.ಗು.ದಯಾನಂದ, ಗ್ರಾ.ಪಂ ಸದಸ್ಯರು, ಶಿಕ್ಷಕರು, ಶಿಕ್ಷಕಿಯರು, ಸಿಆರ್‍ಸಿ ಕ್ಲಸ್ಟರ್ ಎಲ್ಲಾ ಮುಖ್ಯ ಗುರುಗಳು ಮತ್ತು ಮಕ್ಕಳು ಮುಂತಾದವರು ಇದ್ದರು.