ಕಟ್ಟಿ ಸಂಗಾವಿ ಗ್ರಾಮದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ
ಕಲಬುರಗಿ,ಆ.3-ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ಹಿರಿಯ ಕಲಾವಿದರಾದ ದಿವಂಗತ ಬಸವರಾಜ ನರಬೋಳ ಕಟ್ಟಿಸಂಗಾವಿ ಅವರ ಪ್ರಥಮ ಪುಣ್ಯ ಸ್ಮರಣೋತ್ಸವ ಅಂಗವಾಗಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊನ್ನದ ಶಿವಾನಂದ ಶ್ರೀಗಳು ಮಾತನಾಡಿ, ನರಬೋಳಿ ಮತ್ತು ಕಟ್ಟಿ ಸಂಗಾವಿ ಮನೆತನದವರು ಸಂಗೀತ ಸಾಹಿತ್ಯ ಮತ್ತು ನಾಟಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು. ಸಮ್ಮುಖವನ್ನು ಜೇರಟಗಿಯ ಮಹಾಂತ ಸ್ವಾಮಿಗಳು, ನೇಲೋಗಿ ಶ್ರೀಗಳು ವಹಿಸಿದ್ದರು. ನೇತೃತ್ವವನ್ನು ಬಸಯ್ಯಸ್ವಾಮಿಗಳು ಹಾಗೂ ಬಸಯ್ಯ ಶಾಸ್ತ್ರಿಗಳು ಕುಕುನೂರು ವಹಿಸಿದ್ದರು.
ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಕೀರ್ತನ ಕೇಸರಿ ಬಂಡಯ್ಯ ಶಾಸ್ತ್ರಿಗಳು ಸುಂಟನೂರ. ಚನ್ನಯ್ಯ ಶಾಸ್ತ್ರಿಗಳು ಅರಳಗುಂಡಗಿ ಹಿರಿಯ ಕಲಾವಿದರಾದ ಹಣಮಂತ ಮಾಸ್ತರ ನರಿಬೋಳ, ಶರಣಪ್ಪ ಮಾಸ್ತರ ನರಿಬೋಳ, ವೀರಭದ್ರಯ್ಯ ಸ್ವಾಮಿ, ಶಿವಾನಂದ ಮಂದೆವಾಲ, ವೀರಭದ್ರಪ್ಪ ನರಿಬೋಳ, ಜಯರಾಮ ನರಿಬೋಳ, ಸಂಗಮೇಶ ನೀಲಾ ಸೊಂತ, ವೀರೇಶ್ ಬಂಟನಹಳ್ಳಿ, ವಿರೂಪಾಕ್ಷಯ್ಯ ಗೌಡಗಾಂವ, ಸಿದ್ಧಾರೂಢ ಅವರಳ್ಳಿ, ಅನಿಲ್ ಮಠಪತಿ, ಶ್ರೀಶೈಲ್ ವಗ್ಗಾಲಿ, ವೀರೇಶ್ ಧನೂರ್ ಭಾಗವಹಿಸಿದ್ದರು.
ಬಸವರಾಜ ನರಿಬೋಳ ಮನೆತನದವರಾದ ಸಿದ್ದಲಿಂಗ ಬಸವರಾಜ ನರಿಬೋಳ, ಶಿವು ಬಸವರಾಜ ನರಿಬೋಳ, ಸಂತೋಷ್ ಬಸವರಾಜ ನರಿಬೋಳ ಹಾಗೂ ಸಮಸ್ತ ಸಂಗೀತ ಅಭಿಮಾನಿಗಳು ಹಾಗೂ ಊರಿನ ಗಣ್ಯ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.