ಸಿನೀಮಿಯ ರೀತಿಯಲ್ಲಿ ಪಿಸ್ತೂಲ್ ತೋರಿಸಿ ಆರೋಪಿ ಬಂಧಿಸಿದ ಹುಬ್ಬಳ್ಳಿ ಪೊಲೀಸರು
ವಿಜಯಪುರ,ಆ.3:ಸಿನಿಮಿಯ ರೀತಿಯಲ್ಲಿ ಪಿಸ್ತೂಲ್ ತೋರಿಸಿ ಆರೋಪಿಯೊಬ್ಬನನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಿನ್ನೆ ಮಧ್ಯಾಹ್ನ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಆರೋಪಿ ಅವಿನಾಶ ಮಚ್ಚಾಳೆ ಬಂಧನಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ವಿಜಯಪುರಕ್ಕೆ ಆಗಮಿಸಿದ್ದರು.
ಆರೋಪಿ ಅವಿನಾಶ ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ತಾಮ್ರದ ವೈರ್ ಕದ್ದಿದ್ದ ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಆರೋಪಿ ಅವಿನಾಶನನ್ನು ಬಂಧಿಸಲು ವಾಹನದಲ್ಲಿ ಹುಡುಕಾಟದಲ್ಲಿ ಇದ್ದರು.
ಆರೋಪಿ ಕುಟುಂಬಸ್ಥರೊಂದಿಗೆ ವಿಜಯಪುರದಲ್ಲಿದ್ದಾನೆ ಎಂಬ ಮಾಹಿತಿ ಆಧರಿಸಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮಫ್ತಿಯಲ್ಲಿ ವಿಜಯಪುರಕ್ಕೆ ಬಂದಿದ್ದರು.
ಮಫ್ತಿಯಲ್ಲಿದ್ದ ಪೆÇಲೀಸರು ಆರೋಪಿ ಅವಿನಾಶನನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಆತನ ಕುಟುಂಬದ ಮಹಿಳೆಯರಿಂದ ಪೊಲೀಸರ ಮೇಲೆ ಹಲ್ಲೆ ಯತ್ನ ಹಾಗೂ
ಗಲಾಟೆಯ ಕಾರಣ ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಜಮಾಯಿಸಿದರು.
ಈ ವೇಳೆ ಆರೋಪಿ ಅವಿನಾಶ ಪರಾರಿಯಾಗಲು ಯತ್ನಿಸಿದ. ಆಗ ಖಾಕಿ ಪಡೆ ಆರೋಪಿ ಅವಿನಾಶನನ್ನು ಹಿಡಿಯಲು ಪಿಸ್ತೂಲ್ ಹೊರ ತೆಗೆದರು.
ಹುಬ್ಬಳ್ಳಿ ಗ್ರಾಮೀಣ ಪೆÇಲೀಸ್ ಠಾಣೆಯ ಎಎಸ್‍ಐ ಹೊನ್ನಪ್ಪನವರ
ಆರೋಪಿಯನ್ನು ಬಂಧಿಸಿ ವಿಜಯಪುರ ನಗರದ ಗೋಲಗುಂಬಜ್ ಪೆÇಲೀಸ್ ಠಾಣೆಗೆ ಕರೆದೊಯ್ದರು. ಹುಬ್ಬಳ್ಳಿ ಪೆÇಲೀಸರು ಠಾಷೆಯಲ್ಲಿ ತಮ್ಮ ಹೆಸರು ವಿಳಾಸ ಹಾಗೂ ಇತರೆ ಮಾಹಿತಿ ನೀಡಿದರು.
ಬಳಿಕ ಆರೋಪಿ ಅವಿನಾಶನನ್ನು ಹುಬ್ಬಳ್ಳಿಗೆ ಪೆÇಲೀಸರು ಕರೆದ್ಯೊಯ್ದರು.
ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಸಿನೀಮಿಯ ರೀತಿ ನಡೆದ ಪೆÇಲೀಸ ಕಾರ್ಯಾಚರಣೆ ಜನರಿಗೆ ಏನೆಂಬುವುದು ಗೊತ್ತಾಗದೆ ಕೆಲ ಹೊತ್ತು ಆತಂಕ ಮೂಡಿತ್ತು.