ಜಿಲ್ಲಾ ಮಟ್ಟದ ಯಳಮೇಲಿ ಉತ್ಸವ
ಆಲಮೇಲ: ಆ.3:ಯಳಮೇಲಿ ಹಿಂದಿನ ಕಾಲದಿಂದಲೂ ಸಾಂಸ್ಕøತಿಕವಾಗಿ ಸಾಕಷ್ಟು ಗುರುತಿಸಿಕೊಂಡಿದೆ, ಅದರ ನೆನಪನ್ನು ಮರಳಿತರುವ ಕಾರ್ಯಕ್ರಮ ಆಲಮೇಲದಲ್ಲಿ ಸಂಘಟಿಸಿದ್ದು ಶ್ಲಾಘನೀಯ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಆಲಮೇಲ ಪಟ್ಟಣದ ಐ.ಕೆ.ರಾಯಲ್ ಹಾಲ್ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮ್ಮೇಳನ ಯಳಮೇಲಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಗೊಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು, ರಾಂಪೂರ ಆರೂಢಮಠದ ನಿತ್ಯಾನಂದ ಶಿವಯೋಗಿ, ಅಳ್ಳೊಳ್ಳಿಮಠದ ಶ್ರೀಶೈಲ ಸ್ವಾಮೀಜಿ, ಬಿ.ಕೆ.ರೇಣುಕಾ ಅಕ್ಕನವರು ಮೊದಲಾದವರು ಸಾನಿಧ್ಯವಹಿಸಿದ್ದರು.
ಅಧ್ಯಕ್ಷತೆಯನ್ನು ವೈದ್ಯ ಡಾ. ಸಂದೀಪ ಪಾಟೀಲ, ಮಾಜಿ ಶಾಸಕ ರಮೇಶ ಭೂಸನೂರ ನಾಡದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ಆರ್. ಮಾನಕರ, ಹಿರಿಯ ಸಾಹಿತಿ ಸಿದ್ಧರಾಮ ಉಪ್ಪಿನ. ಕಸಾಪ ತಾಲ್ಲೂಕು ಅಧ್ಯಕ್ಷ ಶಿವಶರಣ ಗುಂದಗಿ ವೇದಿಕೆಯಲ್ಲಿದ್ದರು.
ಮಹಾಂತ ಹಳೆಮನಿ ಸ್ವಾಗತಿಸಿದರು. ಅಪ್ಪು ಶೆಟ್ಟಿ ನಿರೂಪಿಸಿದರು. ಶ್ರೀಶೈಲ ಮಠಪತಿ ವಂದಿಸಿದರು.
ವಿಜಯಪುರ ಜಿಲ್ಲಾ ಮಂಟಪ, ಲೈಟ್, ಮೈಕ್ ಮತ್ತು ಪ್ಲಾವರ್ ಡೆಕೊರೇಶನ್ ಹಾಗೂ ಸಪ್ಲಾಯರ್ಸ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಸಮ್ಮೇಳನವು ಆಲಮೇಲ ಪಟ್ಟಣದ ಐ.ಕೆ.ರಾಯಲ್ ಮಂಗಲ ಕಾರ್ಯಾಲಯದಲ್ಲಿ ಅದ್ದೂರಿಯಾಗಿ ನಡೆಯಿತು. ಉದ್ಯಮಕ್ಕೆ ಸಂಬಂಧಿಸಿದಂತೆ ಸಾಮಾಗ್ರಿಗಳನ್ನು ವಿವಿಧ ಮಳಿಗೆಗಳು ತೆರೆಯುವದರ ಮೂಲಕ ವ್ಯವಹಾರ ಮಾಡಿದವು.
ಭವ್ಯ ಮೆರವಣಿಗೆ : ರಂಗಸಜ್ಜಿಕೆಯನ್ನಿಟ್ಟುಕೊಂಡು ದುಡಿದ ಮಹನೀಯರನ್ನು ಸಾರೋಟದಲ್ಲಿ ಮೆರವಣಿಗೆ ಮಾಡಿ ಗೌರವಿಸಲಾಯಿತು. ಗೊಂಬೆ ಕುಣಿತ, ಡೊಳ್ಳುಕುಣಿತ, ಬ್ಯಾಂಜ್ ತಂಡಗಳು ಹಾಗೂ ಜಿಲ್ಲೆಯ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಐ.ಕೆ.ರಾಯಲ್ ಪಂಕ್ಷನ್ ಹಾಲ್ ಗೆ ಬಂದು ತಲುಪಿತು. ಜಿಲ್ಲೆಯ ನೂರಾರು ಪೆಂಡಾಲ್ ಮಂಟಪಗಳ ಮಾಲೀಕರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಆಲಮೇಲ ತಾಲ್ಲೂಕು ಅಧ್ಯಕ್ಷ ಸಂಗಯ್ಯ ಮುಳಮಠ, ಪಟ್ಟಣ ಪಂಚಾಯತಿ ಸದಸ್ಯ ಅಶೋಕಗೌಡ ಕೊಳಾರಿ, ರಮೇಶ ಬಂಟನೂರ, ಪ್ರಭು ವಾಲಿಕಾರ, ಪ್ರಭು ತೆಲ್ಲೂರ, ಸಂಘಟನೆಯ ಖಜಾಂಚಿ ಮಡು ನಿಂಬಾಳ, ಉಪಾಧ್ಯಕ್ಷ ನಿಂಗಪ್ಪ ಗಚ್ಚಿನವರ, ದುಂಡಪ್ಪ ಚಾಂದಕವಟೆ,ಆನಂದ ಅರಳಗುಂಡಗಿ, ಪಾಂಡು ಕಣ್ಣಿ, ಅನ್ವರ್ ನದಾಫ, ಕರ್ಣಸಿಂಗ ರಜಪೂತ ಮೊದಲಾದವರಿದ್ದರು.
ಲಕ್ಕಿ ಡ್ರಾ: ಸಂಘದ ಸದಸ್ಯರಿಗಾಗಿ 30ಕ್ಕೂ ಹೆಚ್ಚು ಬಹುಮಾನಗಳನ್ನು ಚೀಟಿ ಎತ್ತುವದರ ಮೂಲಕ ವೇದಿಕೆಯ ಮೇಲಿದ್ದ ಶ್ರೀಗಳು ಬಹುಮಾನಿತರಿಗೆ ಬಹುಮಾನದ ವಸ್ತುಗಳನ್ನು ಕೊಡಲಾಯಿತು. ಸಾವಿರಕ್ಕೂ ಹೆಚ್ಚು ಜನರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.