ಜಲಶಕ್ತಿ ಮಾಹಿತಿ ಕೇಂದ್ರಕ್ಕೆ ಭೇಟಿ
ಧಾರವಾಡ,ಆ೩: ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ನೂತನ ಕಟ್ಟಡದಲ್ಲಿರುವ ಜಲ ಶಕ್ತಿ ಮಾಹಿತಿ ಕೇಂದ್ರಕ್ಕೆ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಶುಭೋದ ಯಾದವ ಹಾಗೂ ಅವರ ದೆಹಲಿ ತಂಡದ ಸದಸ್ಯರು ಭೇಟಿ ನೀಡಿ, ಮಾಹಿತಿ ಪಡೆದಕೊಂಡರು.
ಜಂಟಿ ನಿರ್ದೇಶಕ ಶುಭೋದ ಯಾದವ (ಂಜmiಟಿ. Iಅ & ಉW) & ಅಗಿಔ ಒ/o ಎಚಿಟ Shಚಿಞಣi. ಆ/o Wಚಿಣeಡಿ ಖesouಡಿಛಿes.ಖಆ&ಉಖ ದೆಹಲಿ ಕೇಂದ್ರ ತಂಡವು ಭೇಟಿ ನೀಡಿ ಜಲ ಶಕ್ತಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ. ಕರ್ನಾಟಕ ವಿಜ್ಞಾನ ಕೇಂದ್ರದ ಜೊತೆ ಒಗ್ಗೂಡಿಸಿಕೊಂಡು ರೈತರಿಗೆ ಜಲ ಶಕ್ತಿ ಕಾಮಗಾರಿಗಳ ಕುರಿತು ಮಾಹಿತಿಯನ್ನು ನೀಡಲು ಸೂಚನೆ ನೀಡಿದರು.
ಪರಿಶೀಲನೆಯ ನಂತರ ಜಂಟಿ ನಿರ್ದೇಶಕ ಶುಭೋದ ಯಾದವ ಮತ್ತು ತಂಡವು ರಾಮಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಸರಕಾರಿ ಕಿ.ಪ್ರಾ ಶಾಲೆ ಮಳೆ ನೀರು ಕೊಯ್ಲು ಕಾಮಗಾರಿ ಪರಿಶೀಲನೆ ಮಾಡಿದರು.ನಂತರ ಅವರು ಕಲ್ಲಾಪುರ ಗ್ರಾಮದ ಅಮೃತ ಸರೋವರ ಮತ್ತು ಬೋರೆವೆಲ್ ಮರುಪೂರ್ಣ ಗುಂಡಿ (ರಿಚಾರ್ಜ್ ಪಿಟ್) ಪರಿಶೀಲಿಸಿ, ಗ್ರಾಮದ ಜನರೊಂದಿಗೆ ಸಂವಾದ ನಡೆಸಿದರು. ಕಾಮಗಾರಿ ಹಾಗೂ ಸಾರ್ವಜನಿಕರಿಂದ ಜಲಶಕ್ತಿ ಯೋಜನೆ ಅನುಕೂಲತೆ ಬಗ್ಗೆ ಮಾಹಿತಿ ಪಡೆದರು. ಮತ್ತು (ಜಿeeಜ bಚಿಛಿಞ ತಿಳಿದು) ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ .ಕೆ., ಉಪ ಕಾರ್ಯದರ್ಶಿ ದೀಪಕ ಮಡಿವಾಳರ, ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ.), ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಮತ್ತು ಆಯಾ ತಾಲೂಕಿನ ಐಇಸಿ ಸಂಯೋಜಕರು ಉಪಸ್ಥಿತರಿದ್ದರು.