ಆರಕ್ಷಕ ಉಪ ನಿರೀಕ್ಷಕರಿಗೆ ಸಿಬ್ಬಂದಿಗಳಿಂದ ಬೀಳ್ಕೊಡುಗೆ
ಅಫಜಲಪುರ:ಆ.3: ತಾಲೂಕಿನ ರೇವೂರ(ಬಿ) ಪೆÇಲೀಸ್ ಠಾಣೆಯ ಪಿ.ಎಸ್.ಐ ಸವಿತಾ ಕಲ್ಲೂರ್ ಅವರು ಆಳಂದ ತಾಲೂಕಿನ ಮಾದನ ಹಿಪ್ಪರಗಾ ಪೆÇಲೀಸ್ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.
ಹಾಗೂ ಇದೆ ವೇಳೆ ನಿಂಬರಗಾ ಪೆÇಲೀಸ್ ಠಾಣೆಯಿಂದ ರೇವೂರ್ (ಬಿ) ಪೆÇಲೀಸ್ ಠಾಣೆಗೆ ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡ ಪಿಎಸ್‍ಐ ವಾತ್ಸಲ್ಯ ಅವರಿಗೆ ಸ್ವಾಗತ ಕೋರಲಾಯಿತು.
ಈ ವೇಳೆ ಸಿಪಿಐ ಚನ್ನಯ್ಯ ಹಿರೇಮಠ, ಕ್ರೈಂ ಪಿ.ಎಸ್.ಐ ಕಮಲು ರಾಠೋಡ ಸಿಬ್ಬಂದಿಗಳಾದ ಶ್ರೀಕಾಂತ ಖಾನಾಪುರ, ಭಗವಂತರಾಯ ಬಿರಾದಾರ, ಶಿವು ಮಲ್ಲಾಬಾದ, ಅಂಬರೀಶ ರೋಡಗಿ, ಸುನೀಲ ಪಾಟೀಲ, ಆದಿಗೊಂಡ ಗಡ್ಡದ, ರಾಜು ಕಲ್ಯಾಣಕರ, ಶಿವಲಿಂಗಪ್ಪ ಬೆಳ್ಳೆ, ರವಿ, ತುಳಜಪ್ಪ, ಶಿವಯ್ಯ, ಮಂಜುನಾಥ, ರಾಜು ಕಟ್ಟಿ, ಸೈಫನ್ ಮುಲ್ಲಾ, ರಾಹುಲ್, ಭೀಮಾಶಂಕರ, ಶರಣು ಬಬಲೇಶ್ವರ, ವಿವೇಕಾನಂದ ಹಾಜರಿದ್ದರು.