ಗುರು ನಾನಕ ಪಬ್ಲಿಕ್ ಶಾಲೆಯ ಮಕ್ಕಳ ಉತ್ತಮ ಸಾಧನೆ 534 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಬೀದರ:ಆ.3:ಸೈನ್ಸ್ ಒಲ್ಯಾಂಪಿಯಾಡ್ ಫೌಂಡೆಷನ್ (ಎಸ್‍ಒಎಫ್) ನ್ಯೂ ದೇಹಲಿ 2023-24 ನೇ ಸಾಲಿನ ಪರೀಕ್ಷೆ ನೇಹರು ಸ್ಟೇಡಿಯಂ ಹತ್ತಿರ ವಿರುವ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಕ್ಕಳ ತಜ್ಞ ಡಾ| ಜಗದೀಶ ಕೋಟೆ ಮಕ್ಕಳಿಗೆ ಸನ್ಮಾನಿ ಗೌರವಿಸಿದರು. ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಹುಮ್ಮಸನ್ನು ಮೂಡಿಸುತ್ತದೆ. ಈ ಪರೀಕ್ಷೆಯಲ್ಲಿ ವಿಜ್ಞಾನ, ಗಣಿತ ಇಂಗ್ಲೀಷ್ ಸಮಾಜಿಕ ಕಂಪ್ಯೂಟರ್ ಮತ್ತು ಸಾಮಾನ್ಯ ಜ್ಞಾನ ಒಳಗೊಂಡಿರುತ್ತದೆ. ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ 534 ವಿದ್ಯಾರ್ಥಿಗಳು ಚಿನ್ನದ ಪದಕ ಗಿಟಿಸಿಕೊಂಡು ಅರ್ಹತೆ ಪಡೆದುಕೊಂಡಿರುವುದು ಶ್ಲಾಘನೀಯ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ವಿಷಯಗಳ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು. ಜೀವನದಲ್ಲಿ ಉತ್ತಮ ಗುರಿ ಸಧಿಸಲು, ಹಾಗೂ ದೇಶ ಅಭಿವೃದ್ದಿಯಾಗಲು ಕಠಿಣ ಪರಿಶ್ರಮ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮಕ್ಕಳು ವೇದಿಕೆಯನ್ನು ಸದುಪಯೋಗ ಬಡಿಸಿಕೊಂಡಾಗ ಜೀವನದಲ್ಲಿ ಅಪೂರ್ವ ಸಾಧನೆ ಮಾಡಲು ಸಾಧ್ಯ, ವಿದ್ಯಾರ್ಥಿಗಳು ವಿವಿಧ ಸ್ಪರ್ಧೇಗಳಲ್ಲಿ ಭಾಗವಹಿಸಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ನಳಿನಿ ಡಿ.ಜಿ., ಶೇಖ್ ಅಮಜದ ಅಲಿ, ಡೀನರಾದ ಹನುಮಾನ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.