ಒಳಮೀಸಲು ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ ಸಿಹಿ ಹಂಚಿ ಸಂಭ್ರಮಮಾದಿಗ ಸಮಾಜ ವಿಜಯೋತ್ಸವ
ಬೀದರ್:ಆ.3: ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಅತೀ ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿಯಲ್ಲಿ ರಾಜ್ಯ ಸರ್ಕಾರ ಒಳಮೀಸಲು ನೀಡಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ನ್ಯಾಯಾಲಯ ತೀರ್ಪು ಪ್ರಕಟವಾಗುತ್ತಿದ್ದಂತೆ ನಗರದ ಮಾದಿಗ ಸಮಾಜದ ವಿವಿಧ ಸಂಘಟನೆಗಳು ಪ್ರಮುಖರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಒಳ ಮೀಸಲು ನೀಡುವಂತೆ ಕಳೆದ ಹಲವು ವರ್ಷಗಳಿಂದ ಮಾಡಿದ ಹೋರಾಟ ಫಲವಾಗಿ ಇದೀಗ ತೀರ್ಪು ನೀಡಿದ್ದು ಖುಷಿ ತಂದಿದೆ. ಪರಿಶಿಷ್ಟರಿಗೆ ಇಂದಿನ ದಿನ ಐತಿಹಾಸಿಕವಾಗಿದೆ ಎಂದು ಪ್ರಮುಖರು ಹೇಳಿದರು.
ಒಳಮೀಸಲಾತಿ ನೀಡುವಂತೆ ಹಲವು ಬಾರಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲಾಗಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಒಳ ಮೀಸಲು ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಮುಖರಾದ ಚಂದ್ರಕಾಂತ ಹಿಪ್ಪಳಗಾಂವ, ರಾಜು ಕಡ್ಯಾಳ, ಫನಾರ್ಂಡಿಸ್ ಹಿಪ್ಪಳಗಾಂವ, ಸುಮಂತ ಕಟ್ಟಿಮನಿ, ಸೀಮನ್ ಹಿಪ್ಪಳಗಾಂವ, ವಿಜಯಕುಮಾರ ಹಿಪ್ಪಳಗಾಂವ, ಪೀಟರ್ ಚಿಟಗುಪ್ಪ, ಕಮಲಾಕರ್ ಹೆಗಡೆ, ಜಾಫಟ್ ಕಡ್ಯಾಳ, ದಯಾಸಾಗರ ಕಡ್ಯಾಳ, ಸಿ.ಎಂ. ದಾಸ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.